»   » ಈ ಗುರುವಾರ ‘ಶ್ರೀ’ ಬಿಡುಗಡೆ

ಈ ಗುರುವಾರ ‘ಶ್ರೀ’ ಬಿಡುಗಡೆ

Subscribe to Filmibeat Kannada

ಆ್ಯಕ್ಷನ್‌ ಮತ್ತು ಥ್ರಿಲ್‌ ಬಯಸುವ ಪ್ರೇಕ್ಷಕರಿಗೆ ಈ ವಾರ ಹೇಳಿ ಮಾಡಿಸಿದಂತಿದೆ! ಬಹು ಕುತೂಹಲ ಕೆರಳಿಸಿರುವ ‘ಶ್ರೀ’ ಚಿತ್ರ ರಾಜ್ಯದೆಲ್ಲೆಡೆ ಗುರುವಾರ(ಜ.19) ತೆರೆಕಾಣಲಿದೆ.

‘ಶ್ರೀ’ಗೆ ಸಂಬಂಧಿಸಿದ ಪೋಸ್ಟರ್‌ಗಳು ಎಲ್ಲರ ಸೆಳೆದಿವೆ. FEEL THE POWER OF ACTION, THE FINAL BATTLE -ಎಂಬ ಉಪಶೀರ್ಷಿಕೆಗಳು ಜಾಹಿರಾತುಗಳಲ್ಲಿ ಕಾಣಿಸುತ್ತಿವೆ. ಈ ಎಲ್ಲದರ ಫಲಿತಾಂಶವನ್ನು ಕಾದುನೋಡಬೇಕು.

ಚಿತ್ರದ ನಾಯಕ ನಟ ವಿಜಯರಾಘವೇಂದ್ರ ಬ್ಯಾಂಕಾಂಗ್‌ಗೆ ತೆರಳಿ ಚೀನೀಯರ ವಿಶಿಷ್ಟ ಬಾಕ್ಸಿಂಗ್‌ ಕಲೆ ಮುಅಯ್‌ ಥಾಯ್‌ ಅಭ್ಯಾಸ ಮಾಡಿದ್ದು, ಈ ಕಲೆ ಅಳವಡಿಸಿಕೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದ್ದು ಎಲ್ಲರಿಗೂ ಗೊತ್ತು. ಚಿತ್ರೀಕರಣದ ಸಂದರ್ಭದಲ್ಲಿ ವಿಜಯರಾಘವೇಂದ್ರ ಕೈಮುರಿದುಕೊಂಡಿದ್ದು, ಅದ್ಧೂರಿಯಾಗಿ ಚಿತ್ರದ ಧ್ವನಿಸುರುಳಿಯನ್ನು ದಾವಣಗೆರೆಯಲ್ಲಿ ಬಿಡುಗಡೆ ಮಾಡಿದ್ದು ಸೇರಿದಂತೆ, ‘ಶ್ರೀ’ ಒಂದಲ್ಲ ಒಂದು ಸುದ್ದಿ ಮಾಡುತ್ತಲೇ ಇದೆ.

ಬಹುವರ್ಷಗಳ ನಂತರ ನಗರದ ಅಭಿನಯ ಚಿತ್ರಮಂದಿರದಲ್ಲಿ ತೆರೆಕಾಣುತ್ತಿರುವ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯೂ ‘ಶ್ರೀ’ಗೆ ಸೇರಿಕೊಂಡಿದೆ.

ಜೋಗಿ ಬೆಡಗಿ ಜೆನ್ನಿಫರ್‌ ಕೊತ್ವಾಲ್‌, ಅನಂತನಾಗ್‌, ಕೋಮಲ್‌ಕುಮಾರ್‌, ಸೆಕ್ಸ್‌ ಬಾಂಬ್‌ ಶಕೀಲಾ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದ ನಿರ್ದೇಶಕರು ಪ್ರಕಾಶ್‌.

Post your views

‘ಶ್ರೀ’ ಬಗ್ಗೆ ಇನ್ನಷ್ಟು :
‘ಚಿನ್ನಾರಿ ಮುತ್ತ’ದಿಂದ ‘ಶ್ರೀ’ವರೆಗೆ


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada