»   » ಕಮಲ್‌ ಹಾಸನ್‌ ಜೊತೆಜೊತೆಯಲಿ ನಮ್ಮೂರ ರಮ್ಯಾ!

ಕಮಲ್‌ ಹಾಸನ್‌ ಜೊತೆಜೊತೆಯಲಿ ನಮ್ಮೂರ ರಮ್ಯಾ!

Subscribe to Filmibeat Kannada


ಬಿಲ್‌ಗೇಟ್ಸ್‌ ಪ್ರತಿಷ್ಠಾನ ಹೆಚ್‌ಐವಿ-ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸುವ 10ನಿಮಿಷ ಕಾಲಾವಧಿಯ ಕಿರುಚಿತ್ರ ತಯಾರಿಸುತ್ತಿದ್ದು, ಈ ಚಿತ್ರದಲ್ಲಿ ರಮ್ಯಾ ಅಭಿನಯಿಸಲು ಸಹಿ ಹಾಕಿದ್ದಾರೆ.

ಕನ್ನಡದ ಹುಡುಗಿಯರು ದೊಡ್ಡವರಾಗುತ್ತಿದ್ದಾರೆ! ಹೀಗಾಗಿಯೇ ರಕ್ಷಿತಾ ಮದುವೆಗೆ ಅವಸರ ತೋರಿಸಿದರು ಎನ್ನುವುದು ಒಂದು ತಮಾಷೆ. ಆದರೆ ಈಗಿಲ್ಲಿ ಪ್ರಸ್ತಾಪಿಸುತ್ತಿರುವುದು ರಮ್ಯಾ ದೊಡ್ಡವರಾಗುತ್ತಿರುವ ವಿಚಾರ.

ದೊಡ್ಡವರಾಗೋದು ಅನ್ನೋ ಪದವನ್ನು ವಿಚಿತ್ರವಾಗಿ ನೋಡೋ ಅಗತ್ಯ ಇಲ್ಲಿಲ್ಲ. ದೊಡ್ಡವರಾಗೋದು ಅನ್ನೋದರ ಅರ್ಥ, ವೃತ್ತಿ ಬದುಕಿನ ಎತ್ತರಗಳ ಮುಟ್ಟುವುದು! ಅಂದ ಹಾಗೆ ನೋಡ್ತಾ ನೋಡ್ತಾನೇ ರಮ್ಯಾ ಮೇಡಂ ಬೆಳೆಯುತ್ತಿದ್ದಾರೆ. ಅವರು ಬೆಳೆಯುತ್ತಿರುವ ಪರಿ ನಿಜಕ್ಕೂ ಆರೋಗ್ಯಕರ. ಅವರೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಿಲ್‌ಗೇಟ್ಸ್‌ ಪ್ರತಿಷ್ಠಾನ ಹೆಚ್‌ಐವಿ-ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸುವ 10ನಿಮಿಷ ಕಾಲಾವಧಿಯ ಕಿರುಚಿತ್ರ ತಯಾರಿಸುತ್ತಿದ್ದು, ಈ ಚಿತ್ರದಲ್ಲಿ ರಮ್ಯಾ ಅಭಿನಯಿಸಲು ಸಹಿ ಹಾಕಿದ್ದಾರೆ.

ಕಮಲ ಹಾಸನ್‌ ಮತ್ತಿತರ ಖ್ಯಾತನಾಮರೊಂದಿಗೆ ನಮ್ಮೂರಿನ ಹುಡುಗಿ ರಮ್ಯಾ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಸಕ್ಕರೆ ಹಂಚಬೇಕಾದ ಸಮಾಚಾರ. ಕಿರುಚಿತ್ರದ ಐದು ದೃಶ್ಯಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಯಾವುದೇ ಗೌರವಧನ ಪಡೆಯದೇ ಅಭಿನಯಿಸಲು ರಮ್ಯಾ ಒಪ್ಪಿದ್ದಾರೆ.

ಏಡ್ಸ್‌ ಮಾರಿ ವಿರುದ್ಧದ ಸಮರದಲ್ಲಿ ಒಂದು ಕೈಸೇರಿಸಲು ಅವಕಾಶ ಸಿಕ್ಕಿದೆಯಲ್ಲ ಎಂಬುದು ಅವರಿಗೆ ಖುಷಿ ನೀಡಿದೆ. ಮತ್ತೊಂದು ಕಡೆ ಟಿ.ಎನ್‌.ಸೀತಾರಾಮ್‌ರ ‘ಮೀರಾ ಮಾಧವ ರಾಘವ’ದಲ್ಲಿ ಅಭಿನಯಿಸುತ್ತಿದ್ದಾರೆ. ಅಮೃತಧಾರೆ, ಜೊತೆಜೊತೆಯಲಿ ಚಿತ್ರಗಳ ನಂತರ ಮತ್ತೊಂದು ಚೆಂದದ ಪಾತ್ರ ರಮ್ಯಾಗೆ ಒಲಿದಿದೆ.

ಇದೆಲ್ಲ ಆದ ಮೇಲೆ ಸೂರ್ಯ ಜೊತೆ ತಮಿಳು ಚಿತ್ರವೊಂದರಲ್ಲಿ ಅವರು ಅಭಿನಯಿಸುವರು. ಇವೆಲ್ಲ ಮುಗಿಯಲಿ ಎಂದು ಹಂಸಲೇಖ ಕಾಯುತ್ತಿದ್ದಾರೆ. ಕಾರಣ ಅವರು ನಿರ್ಮಾಣ ಮಾಡಲಿರುವ ಹೊಸ ಚಿತ್ರ ‘ಬಾಗಿನ’ಕ್ಕೆ ರಮ್ಯಾನೇ ನಾಯಕಿ. ಇದು ‘ನೆನಪಿರಲಿ’ ಖ್ಯಾತಿಯ ರತ್ನಜ ನಿರ್ದೇಶನದ ಎರಡನೇ ಚಿತ್ರವಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada