ತಾರೆಗಳ ತೋಟದಲ್ಲಿ ಜನ ಸಾಮಾನ್ಯರ ಸಂಚಾರ
*ದಟ್ಸ್‌ಕನ್ನಡ ಬ್ಯೂರೊ
ಮೇಳಗಳ ನಗರ ಬೆಂಗಳೂರಿನಲ್ಲಿ ಈಗ ಸಿನಿಮಾ ಕಲಾವಿದರ ಮೇಳ !
ವಿವಿಧ ಭಾರತೀಯ ಭಾಷೆಗಳ ಸಿನಿಮಾ ಕಲಾವಿದರು ಭಾಗವಹಿಸಲಿರುವ ಸಾಂಸ್ಕೃತಿಕ ಕಲಾ ಮೇಳ ‘ಸಿನಿ ಎಕ್ಸ್‌ಪೊ 2003’ ಅರಮನೆ ಮೈದಾನದಲ್ಲಿ ಏಪ್ರಿಲ್ 18ರ ಶುಕ್ರವಾರದಿಂದ ಮೇ 18ರವರೆಗೆ ನಡೆಯಲಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ರಮೇಶ್ ಅವರು ಹೇಳುವ ಪ್ರಕಾರ- ಭಾರತದಲ್ಲಿ ಇಂಥದೊಂದು ಮೇಳ ನಡೆಯುತ್ತಿರುವುದು ಇದೇ ಮೊದಲು. ಚಿತ್ರರಂಗದ ಎಲ್ಲ ವಲಯಗಳು ಸೇರಿ ಆಯೋಜಿಸುತ್ತಿರುವುದು ಈ ಪ್ರತಿಷ್ಠಿತ ಮೇಳದ ಇನ್ನೊಂದು ವಿಶೇಷ.
ಅಂದಹಾಗೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಕಟ್ಟಡದ ಸಹಾಯಾರ್ಥವಾಗಿ ಈ ಮೇಳ ನಡೆಯುತ್ತಿದೆ.
ಪ್ರತಿದಿನ ಸಂಜೆ 6.30 ರಿಂದ ರಾತ್ರಿ 9.30 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು , ಸಿನಿಪ್ರಿಯರು ಇಷ್ಟು ಕಾಲ ತೆರೆಯ ಮೇಲೆ ನೋಡುತ್ತಿದ್ದ ತಮ್ಮ ನೆಚ್ಚಿನ ತಾರೆಗಳನ್ನು ಸಮೀಪದಿಂದ ನೋಡಬಹುದು.
ಸಿನಿಮಾ ಕಲಾವಿದರೊಂದಿಗೆ ಹರಟೆ ಹೊಡೆಯಲು, ಹಸ್ತಾಕ್ಷರ ಪಡೆಯಲು, ಫೋಟೊ ತೆಗೆಸಿಕೊಳ್ಳಲು ಕೂಡ ಇದು ಸದವಕಾಶ. ಬರಿ ಮನರಂಜನೆ ಮಾತ್ರವಲ್ಲ - ಗರಿಮುರಿ ತಿಂಡಿ ತಿನಿಸುಗಳ ಮಳಿಗೆಗಳೂ ಇಲ್ಲುಂಟು.
ಪ್ರವೇಶ ದರ :
ಸಾಮಾನ್ಯ ದಿನಗಳಲ್ಲಿ ಪ್ರತಿಯಾಬ್ಬರಿಗೆ 30 ರುಪಾಯಿ.
ರಜಾ ದಿನಗಳಲ್ಲಿ ಪ್ರತಿ ಟಿಕೆಟಿಗೆ- 50 ರುಪಾಯಿ.
ಪ್ರತಿದಿನವೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ವಿಶೇಷ ಪಾಸ್ ಸೌಲಭ್ಯ ಉಂಟು. ಈ ಪಾಸ್ ಬೆಲೆ 1 ಸಾವಿರ ರುಪಾಯಿ.
ಇನ್ನಷ್ಟು :
‘ಸಿನಿ ಎಕ್ಸ್‌ಪೋ’ದಲ್ಲಿ ದೈತ್ಯ ಪ್ರತಿಭೆಗಳು
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications