»   » ಅಣ್ಣಾವ್ರು ನಡೆದರು, ಸ್ನಾನ ಮಾಡಿದರು

ಅಣ್ಣಾವ್ರು ನಡೆದರು, ಸ್ನಾನ ಮಾಡಿದರು

Posted By:
Subscribe to Filmibeat Kannada

ಕಳೆದ ವಾರ ಪೃಷ್ಠದ ಕೆಳಭಾಗದ ‘ಚಪ್ಪೆ ಬದಲಾವಣೆ’ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವರನಟ ಡಾ.ರಾಜ್‌ಕುಮಾರ್‌ ಅವರನ್ನು ತೀವ್ರ ನಿಗಾ ಘಟಕದಿಂದ ಆಸ್ಪತ್ರೆಯ ವಿಐಪಿ ಕೋಣೆಗೆ ವರ್ಗಾಯಿಸಲಾಗಿದೆ.

ಸೋಮವಾರ (ಮಾ.17) ಸುಮಾರು 100 ಮೀಟರ್‌ಗಳಷ್ಟು ದೂರ ನಡೆದ ಅವರು ಬಲು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಸೋಮವಾರ ಅವರು ನಿರಾಯಾಸವಾಗಿ ಸ್ನಾನವನ್ನೂ ಮಾಡಿದರು. ಬಹು ವರ್ಷಗಳ ಕಾಲ ಯೋಗ ಮಾಡಿರುವುದರಿಂದ ತೊಂದರೆಯಿಂದ ರಾಜ್‌ ಬಲುಬೇಗ ಗುಣಮುಖರಾಗಬಲ್ಲರು ಎಂದು ಚೆನ್ನೈನ ಎಂಐಓಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಪ್ರೊ. ಪಿ.ವಿ.ಎ.ಮೋಹನ್‌ದಾಸ್‌ ಹೇಳಿದರು.

ಮಾರ್ಚ್‌ 19 ಅಥವಾ 20ನೇ ತಾರೀಕು ಅವರ ಬಲಗಾಲಿನ ಮಂಡಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅದಾದ 10 ದಿನಗಳ ನಂತರ ಅಣ್ಣಾವ್ರು ಡಿಸ್ಚಾರ್ಜ್‌ ಆಗಿ, ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಮರಳಲಿದ್ದಾರೆ.

(ಇನ್ಫೋ ವಾರ್ತೆ)

Post your views

ಇದನ್ನೂ ಓದಿ-
ವರನಟ ರಾಜ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada