»   » ಕೆ.ಎಂ.ವೀರೇಶ್‌ ಮೂರು ವರ್ಷಗಳ ಸಾಧನೆಗೆ ಸಂದ ಸಮ್ಮಾನ

ಕೆ.ಎಂ.ವೀರೇಶ್‌ ಮೂರು ವರ್ಷಗಳ ಸಾಧನೆಗೆ ಸಂದ ಸಮ್ಮಾನ

Posted By:
Subscribe to Filmibeat Kannada

ಕನ್ನಡ ಸಿನಿಮಾ ವೆಬ್‌ಸೈಟ್‌ ಮಾಡಿ ಗೆಲ್ಲುತ್ತೇನೆ ಎಂದು ಹೊರಟ ಚಿತ್ರಲೋಕಡಾಟ್‌ಕಾಂನ ಕೆ.ಎಂ.ವೀರೇಶ್‌- ಗೆದ್ದುದು ಸಿನಿಮಾ ಪ್ರೇಮಿಗಳನ್ನು . ಅದೇ ವೀರೇಶ್‌ ಈಗ ಪ್ರತಿಷ್ಠಿತ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ.
ಅಭಿನಂದನೆಗಳು.

ಅಂತರರಾಷ್ಟ್ರೀಯ ವೆಬ್‌ ಮಾಸ್ಟರ್‌ ಹಾಗೂ ವಿನ್ಯಾಸಕಾರರ ಸಂಸ್ಥೆ (International Association of Web Master and Designers) ನೀಡುವ ಪ್ರತಿಷ್ಠಿತ ‘ಗೋಲ್ಡನ್‌ ವೆಬ್‌’ ಪ್ರಶಸ್ತಿ (Golden Web Award) ಚಿತ್ರಲೋಕ.ಕಾಂಗೆ ದೊರೆತಿದೆ. ಸಿನಿಮಾ ವೆಬ್‌ಸೈಟ್‌ ಕಟ್ಟಲು, ಕಟ್ಟಿ ಬೆಳೆಸಲು ಹಗಲಿರುಳು ಹೆಣಗಿದ ವೀರೇಶ್‌ ಸಾಹಸಕ್ಕೆ ಸಂದ ಮನ್ನಣೆಯಿದು.

ಕಳೆದ ಮೂರು ವರ್ಷಗಳಿಂದ ಕನ್ನಡ ಚಿತ್ರರಂಗದ ವೆಬ್‌ ಅಭಿವ್ಯಕ್ತಿಯಾಗಿ ಗುರ್ತಿಸಿಕೊಂಡು ಬಂದಿರುವ ಚಿತ್ರಲೋಕ.ಕಾಂ- ಸ್ಯಾಂಡಲ್‌ವುಡ್‌ನ ಆಯಾ ಕ್ಷಣದ ಬೆಳವಣಿಗೆಗಳನ್ನು ಚಿತ್ರ ಸಮೇತ ಕಟ್ಟಿಕೊಡುವುದರಲ್ಲಿ ಮೊದಲ ಹೆಸರು. ಆರ್ಥಿಕ ಹಿಂಜರಿತದಿಂದಾಗಿ ಡಾಟ್‌ಕಾಂಗಳ ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲೂ ಎದೆಗುಂದದ ವೀರೇಶ್‌ ಚಿತ್ರಲೋಕವನ್ನು ಇನ್ನಷ್ಟು ಚೆಂದಗೊಳಿಸಲು ಪ್ರಯತ್ನಿಸಿದವರು.

ಅಂದಹಾಗೆ, ಅಂತರರಾಷ್ಟ್ರೀಯ ವೆಬ್‌ ಮಾಸ್ಟರ್‌ ಹಾಗೂ ವಿನ್ಯಾಸಕಾರರ ಸಂಸ್ಥೆ - ಆನ್‌ಲೈನ್‌ ವೃತ್ತಿಪರರ ವಿಶ್ವದ ಅಗ್ರಮಾನ್ಯ ಸಂಸ್ಥೆಯಾಗಿದೆ. 145 ರಾಷ್ಟ್ರಗಳ 2.35 ಲಕ್ಷಕ್ಕೂ ಹೆಚ್ಚು ಮಂದಿ ಈ ಸಂಸ್ಥೆಯ ಸದಸ್ಯತ್ವ ಹೊಂದಿದ್ದಾರೆ.

ವೀರೇಶ್‌ಗೆ ಅಭಿನಂದನೆ ತಿಳಿಸಿ- kmveeresh@chitraloka.com

(ಇನ್ಫೋ ವಾರ್ತೆ)

Post your views

ಗೋಲ್ಡನ್‌ ವೆಬ್‌ ಪ್ರಶಸ್ತಿ ಅಂದರೇನು ?

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada