»   » ವೀರ ‘ಮದಕರಿ ನಾಯಕ’ನ ಪಾತ್ರದಲ್ಲಿ ಅಂಬರೀಷಣ್ಣ !

ವೀರ ‘ಮದಕರಿ ನಾಯಕ’ನ ಪಾತ್ರದಲ್ಲಿ ಅಂಬರೀಷಣ್ಣ !

Posted By:
Subscribe to Filmibeat Kannada

ಚಿತ್ರದುರ್ಗದ ವೀರ ಪಾಳೇಗಾರ ಮದಕರಿ ನಾಯಕನ ಚರಿತ್ರೆ, ಕೇಳುಗರಲ್ಲಿ ರೋಮಾಂಚನ ಹುಟ್ಟಿಸುತ್ತದೆ. ಇಂತಹ ಒಂದು ಐತಿಹಾಸಿಕ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ.

ಚಿತ್ರದುರ್ಗದಲ್ಲಿ ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿದ್ದು, ರೆಬಲ್‌ಸ್ಟಾರ್‌ ಅಂಬರೀಷ್‌ ಮದಕರಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಸುಮಲತಾ, ಮದಕರಿ ನಾಯಕನ ಪತ್ನಿ ಪಾತ್ರಕ್ಕೆ ಆಯ್ಕೆಗೊಂಡಿದ್ದಾರೆ.

ಮದಕರಿ ನಾಯಕನ ವೀರ ಬದುಕಿಗೆ ಕನ್ನಡಿ ಹಿಡಿಯುವ ಚಿತ್ರಕ್ಕೆ ‘ಕಲ್ಲರಲಿ ಹೂವಾಗಿ’ ಎಂದು ನಾಮಕರಣ ಮಾಡಲಾಗಿದೆ. ಹೆಸರಾಂತ ನಿರ್ದೇಶಕ ಟಿ.ಎಸ್‌. ನಾಗಾಭರಣ, ನಿರ್ದೇಶನದ ಹೊರೆ ಹೊತ್ತಿದ್ದಾರೆ. ಒಂದು ಒಳ್ಳೆಯ ಐತಿಹಾಸಿಕ ಚಿತ್ರವನ್ನು ಪ್ರೇಕ್ಷಕರ ಮುಂದಿಡುವ ಕನಸು ಭರಣ ಅವರದು.

ಡೈನಮಿಕ್‌ ಸ್ಟಾರ್‌ ದೇವರಾಜ್‌ ಬಹಳ ದಿನಗಳ ನಂತರ ಮುಖಕ್ಕೆ ಬಣ್ಣ ಹಚ್ಚುತ್ತಿದ್ದು, ಹೈದರ್‌ ಆಲಿ ಪಾತ್ರವನ್ನು ನಿರ್ವಹಿಸಲು ಒಪ್ಪಿದ್ದಾರೆ. ವಿಜಯ ರಾಘವೇಂದ್ರ, ತಮಿಳು ನಟಿ ಉಮಾ(ಉಪ್ಪಿ ದಾದಾ ಎಂಬಿಬಿಎಸ್‌ ಚಿತ್ರದ ನಾಯಕಿ) ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

ಮಧು ಬಂಗಾರಪ್ಪ ನಿರ್ಮಾಣದ ಈ ಚಿತ್ರದ ಛಾಯಾಗ್ರಾಹಕರು ಎಚ್‌.ಸಿ.ವೇಣು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada