»   » ಅಮೀರ್‌ ಸಿನಿಮಾಗೆ ಕಥೆ ಬರೆಯುತ್ತಿರುವ ಅಶುತೋಷ್‌

ಅಮೀರ್‌ ಸಿನಿಮಾಗೆ ಕಥೆ ಬರೆಯುತ್ತಿರುವ ಅಶುತೋಷ್‌

Posted By: Super
Subscribe to Filmibeat Kannada

ಲಗಾನ್‌ ನಂತರ ಏನು?ನಾವು ಸುಮ್ಮನೇ ಕುಳಿತಿಲ್ಲ ಎನ್ನುತ್ತಾರೆ ಲಗಾನ್‌ ನಿರ್ದೇಶಕ ಅಶುತೋಷ್‌ ಗೌರೀಕರ್‌. ಮತ್ತೆ ಕಥೆ ಬರೆಯಲು ಗೌರೀಕರ್‌ ಅವುಡುಗಚ್ಚಿ ಕೂತಿದ್ದಾರೆ. ಅಲ್ಲಿಗೆ ಅಶುತೋಷ್‌-ಅಮೀರ್‌ ಜೋಡಿ ಬೆಳ್ಳಿತೆರೆಯಲ್ಲಿ ಮತ್ತೊಂದು ಮೋಡಿಗೆ ಸಿದ್ಧವಾಗುತ್ತಿದೆಯೆಂದಾಯಿತು!

2003 ನೇ ಇಸವಿ ಜನವರಿಯಲ್ಲಿ ಲಗಾನ್‌ ನಂತರದ ಅಮೀರ್‌ ನಿರ್ಮಾಣದ ಹೊಸ ಚಿತ್ರ ಸೆಟ್ಟೇರಲಿದೆ. ಅಮೀರ್‌ ಖಾನ್‌ ಲಾಂಛನದಲ್ಲಿಯೇ ಈ ಭಾರೀ ಬಜೆಟ್ಟಿನ ಚಿತ್ರ ನಿರ್ಮಾಣವಾಗಲಿದೆ ಎಂದು ಅಶುತೋಷ್‌ ಕನಸುಗಳನ್ನು ಎದುರಿಗಿಡುತ್ತಾರೆ. ಅವರು ಕೋಲ್ಕತ್ತಾದಲ್ಲಿ ನಡೆದ ಸಮಾರಂಭದಲ್ಲಿ ಸತ್ಯಜಿತ್‌ ಭಟ್ಕಳ್‌ರ - ದಿ ಸ್ಪಿರಿಟ್‌ ಆಫ್‌ ಲಗಾನ್‌ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಹೊಸ ಚಿತ್ರದಲ್ಲಿ ಅಮೀರ್‌ ನಟಿಸಲಿದ್ದಾರೆ. ಆದರೆ ಚಿತ್ರದ ಬಜೆಟ್‌ ಇನ್ನೂ ಅಂತಿಮವಾಗಿಲ್ಲ . ಇನ್ನೆರಡು ತಿಂಗಳಲ್ಲಿ ತಾರಾಗಣ ಸೇರಿದಂತೆ ಚಿತ್ರದ ರೂಪುರೇಷೆ ಸ್ಪಷ್ಟವಾಗಬಹುದು ಎಂದು ಗೌರೀಕರ್‌ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಲಗಾನ್‌ ಬಗ್ಗೆ ವಿಮರ್ಶಕರ ಟೀಕೆಗಳಾದ ದೀರ್ಘ ನಿರೂಪಣೆ ಹಾಗೂ ಹಾಡುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಹೊಸ ಚಿತ್ರದಲ್ಲೂ ಈ ಎರಡೂ ಅಂಶಗಳು ಇರುತ್ತವೆ ಎಂದರು.

ಹಾಡುಗಳು ಭಾರತೀಯ ಸಿನಿಮಾದ ಅವಿಭಾಜ್ಯ ಅಂಗ. ದೀರ್ಘ ನಿರೂಪಣೆ ಕೂಡ ನಮ್ಮ ಅನನ್ಯತೆಯೇ. ನಾವು ಪಶ್ಚಿಮದ ನೀತಿಗಳನ್ನು ಒಪ್ಪಿಕೊಳ್ಳುವುದಾದರೆ, ಅವರು ಹಿಂದಿ ಸಿನಿಮಾವನ್ನು ನೋಡಲು ಏಕೆ ಬರುತ್ತಾರೆ ಎಂದು ಅಶುತೋಷ್‌ ಪ್ರಶ್ನಿಸಿದರು. (ಪಿಟಿಐ)

English summary
Aamir-Ashutosh duo to strike magic again

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada