»   » ಈವಾರ ಮತ್ತೊಂದು ಕರವಸ್ತ್ರದ ಚಿತ್ರ ‘ತವರಿನ ಸಿರಿ’

ಈವಾರ ಮತ್ತೊಂದು ಕರವಸ್ತ್ರದ ಚಿತ್ರ ‘ತವರಿನ ಸಿರಿ’

Posted By:
Subscribe to Filmibeat Kannada

ಸೆಂಟಿಮೆಂಟ್‌ ಹೆಸರಲ್ಲಿ ಪ್ರೇಕ್ಷಕರನ್ನು ಮೆಂಟಲ್‌ ಮಾಡೋ ಸ್ಪೆಷಲಿಸ್ಟ್‌ ಸಾಯಿಪ್ರಕಾಶ್‌ ಚಿತ್ರದ ನಿರ್ದೇಶಕರು. ಎಂದಿನಂತೆ ತವರು ಚಿತ್ರಗಳ ಸೂತ್ರದಾರ ಅಜಯಕುಮಾರ್‌, ಚಿತ್ರಕ್ಕೆ ಕತೆ ಒದಗಿಸಿದ್ದಾರೆ. ಹಂಸಲೇಖ ಸಂಗೀತ ಚಿತ್ರಕ್ಕಿದೆ.

ಈಗಾಗಲೇ ‘ಹಸಿದಾಗ ಅನ್ನ’, ‘ಮಾತಾಡ್‌ ಮಾತಾಡ್‌ ಮಲ್ಲಿಗೆ’ ಹಾಡುಗಳು ಎಲ್ಲರ ಕಿವಿಯಲ್ಲಿ ತುಂಬಿವೆ. ಕ್ಯಾಸೆಟ್‌ ಮಾರುಕಟ್ಟೆಯಲ್ಲಿ ಚಿತ್ರ ಗೆದ್ದಿದೆ ಎನ್ನುವ ರಾಮು, ಚಿತ್ರದ ಒಂದು ಲಕ್ಷ ಧ್ವನಿಸುರಳಿ ಮತ್ತು 25ಸಾವಿರ ಸಿ.ಡಿಗಳನ್ನು ಮಾರಾಟ ಮಾಡಿರುವುದಾಗಿ ಹೆಮ್ಮೆಯಿಂದ ಹೇಳಿದ್ದಾರೆ.

‘ತವರಿನ ಸಿರಿ’, ‘ಬಂಗಾರದ ಮನುಷ್ಯ’ದಂಥ ಚಿತ್ರ ಎನ್ನುವ ರಾಮು, ಚಿತ್ರ ನಿರೀಕ್ಷೆಗಿಂತಲೂ ಚೆನ್ನಾಗಿ ಬಂದಿದೆ. ಅದ್ಧೂರಿಯಾಗಿ ಚಿತ್ರೀಕರಿಸಲಾಗಿದ್ದು, ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ತವರಿನ ಸಿರಿ’ ರಾಮು ನಿರ್ಮಾಣದ 21ನೇ ಚಿತ್ರ. ಜೊತೆಗೆ ಅವರ ಬ್ಯಾನರ್‌ನಲ್ಲಿನ ಪೂರ್ಣ ಪ್ರಮಾಣದ ಸೆಂಟಿಮೆಂಟ್‌ ಚಿತ್ರ. ಹಿಂದೊಮ್ಮೆ ‘ತವರಿಗೆ ಬಾ ತಂಗಿ’ ಚಿತ್ರವನ್ನು ಬಿಡುಗಡೆ ಮಾಡಿದ್ದ ರಾಮು, ಸೆಂಟಿಮೆಂಟ್‌ ಚಿತ್ರಗಳೂ ಲಾಭ ಗಳಿಸುವ ಸಂಗತಿಯನ್ನು ಅರಿತವರು.

ಡೈಸಿ ಬೊಪ್ಪಣ್ಣ, ಸ್ಪೈಸಿ ಪಾತ್ರಗಳ ಪಕ್ಕಕ್ಕಿಟ್ಟು, ‘ತವರಿನ ಸಿರಿ’ಯಲ್ಲಿ ಮಿಂಚಿದ್ದಾರೆ. ಅಶ್ವಿನಿ, ಆಶಿತಾ, ಮುಖ್ಯಮಂತ್ರಿ ಚಂದ್ರು, ಶೋಭರಾಜ್‌, ಹೇಮಾ ಚೌದರಿ, ದೊಡ್ಡಣ್ಣ ತಾರಾಗಣದಲ್ಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada