»   » ನಮ್ಮೂರೆ ನನಗೆ ಸಾಕು- ಕರೀನಾಕಪೂರ್‌

ನಮ್ಮೂರೆ ನನಗೆ ಸಾಕು- ಕರೀನಾಕಪೂರ್‌

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಮಾಜಿ ಪ್ರೇಮಿ ಸಲ್ಮಾನ್‌ಖಾನ್‌ ಗಲಾಟೆಯನ್ನು ಕೇರ್‌ ಮಾಡದ ಐಶ್ವರ್ಯಾ ರೈ ಹಾಲಿವುಡ್‌ ಬಗ್ಗೆ ಮಾತನಾಡಲಾರಂಭಿಸಿದ್ದಾಳೆ. ಆಕೆಯ ಲಕ್ಕೂ ಚೆನ್ನಾಗಿದೆ ಅನ್ನಿ. ಕ್ಯಾನೆ ಚಿತ್ರೋತ್ಸವದ ಜ್ಯೂರಿಯಾಗಿ ಬುಲಾವ್‌ ಬಂತು. ಚಿತ್ರೋತ್ಸವದಲ್ಲಿ ನಮೂನಿ ನಮೂನಿ ಡ್ರೆಸ್‌ ಹಾಕಿಕೊಂಡು ಐಶ್‌ ಮಿಂಚಿಂಗೋ ಮಿಂಚಿಂಗು. ಬಾಲಿವುಡ್‌ನ ಇತರ ನಾಯಕಿಯರ ಹೊಟ್ಟೆಯಲ್ಲಿ ಬೆಂಕಿ !

ಆದರೆ ಕನಸಿನ ಪೋರಿ ಕರೀನಾ ಕಪೂರ್‌ ಇದಕ್ಕೆಲ್ಲಾ ಕೇರ್‌ ಮಾಡುವುದೇ ಇಲ್ಲ . ಯಾಕಂದ್ರೆ ಕರೀನಾ ತನ್ನನ್ನು ತಾನು ಬಾಲಿವುಡ್‌ಗೆ ಅರ್ಪಿಸಿಕೊಂಡಾಗಿದೆ. ‘ಸೋಲು ಗೆಲುವು ಏನಿದ್ದರೂ ಬಾಲಿವುಡ್‌ನಲ್ಲೇ. ಅದರಾಚೆಗೆ ನಾನು ಯೋಚನೆ ಮಾಡುವುದೇ ಇಲ್ಲಪ್ಪಾ’ ! ಅಂತಾಳೆ ಕರೀನಾ.

ಇಷ್ಟಕ್ಕೂ ಕರೀನಾಗೆ ಡಿಫರೆಂಟ್‌ ಚಿತ್ರಗಳೆಂದರೆ ಅಷ್ಟಕ್ಕಷ್ಟೆ. ಕಮರ್ಷಿಯಲ್ಲಾಗೇ ಡಿಫರೆಂಟಾಗಿದ್ದರೆ ಪರವಾಗಿಲ್ಲ. ಮುಖ್ಯವಾಹಿನಿಯಿಂದ ಭಿನ್ನವಾಗಿ ನಿಲ್ಲುವ ಚಿತ್ರಗಳ ಬಗ್ಗೆ ಕರೀನಾಗೆ ಆಸಕ್ತಿ ಇಲ್ಲ. ಆರ್ಟ್‌ ಸಿನೆಮಾಗಳನ್ನಂತೂ ಕರೀನಾ ಇಷ್ಟಪಡುವುದೇ ಇಲ್ಲ. ಹಾಗೇ ಹಾಲಿವುಡ್‌ ಕೂಡ. ಇದು ಸರೀನಾ ಕರೀನಾ ಅಂದ್ರೆ-

‘ಯಾಕಾದರೂ ನಾನು ಹಾಲಿವುಡ್‌ ಬಗ್ಗೆ ಯೋಚಿಸಲಿ ? ಸ್ಟೀವನ್‌ ಸ್ಪೀಲ್‌ಬರ್ಗ್‌ನಂತಹ ನಿರ್ದೇಶಕರ ಚಿತ್ರದಲ್ಲಿ ನಾನೇಕೆ ನಟಿಸಲಿ. ಆಫ್ಟರಾಲ್‌ ಆ ನಿರ್ದೇಶಕ ನನ್ನನ್ನು ಕೋರಸ್‌ ಡಾನ್ಸರ್‌ಗಳ ಸಾಲಿನಲ್ಲಿ ನಿಲ್ಲಿಸಿದರೂ ಅದನ್ನೂ ನಾನು ಒಪ್ಪಿಕೊಳ್ಳಬೇಕೆ ? ಅದರ ಅಗತ್ಯವೇ ನನಗಿಲ್ಲ’.

‘ಬಾಲಿವುಡ್‌ನಲ್ಲೇ ಎಂತೆಂಥ ನಿರ್ದೇಶಕರಿದ್ದಾರೆ ! ಸಂಜಯ್‌ ಲೀಲಾ ಬನ್ಸಾಲಿ, ಅಶುತೋಷ್‌ ಗೌವರೀಕರ್‌ ಅವರ ಸಿನೆಮಾಗಳು ಆಸ್ಕರ್‌ಗೆ ಹೋಗಿಲ್ಲವಾ ? ಅಂತಹ ಉತ್ತಮ ನಿರ್ದೇಶಕರ ಸಿನೆಮಾದಲ್ಲಿ ನಾನು ನಟಿಸಬೇಕು. ನಂತರ ಬೇಕಿದ್ದರೆ ಹಾಲಿವುಡ್‌ ಬಗ್ಗೆ ಯೋಚಿಸೋಣವಂತೆ. ಈಗಲೇ ವಿದೇಶಕ್ಕೆ ಹೋಗಿ ಹತ್ತರೊಟ್ಟಿಗೆ ಹನ್ನೊಂದಾಗಿ ಗುರುತಿಸಿಕೊಳ್ಳುವುದು ನಂಗಿಷ್ಟವಿಲ್ಲ’ - ಇದು ಕರೀನಾ ಹೇಳುವ ಖಂಡ ತುಂಡ ಮಾತು !

ಸದ್ಯಕ್ಕೆ ಮೇಂ ಪ್ರೇಮ್‌ ಕೀ ದಿವಾನೀ ಹ್ಞೂ ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿ ಕರೀನಾ ಭವಿಷ್ಯ ಅಡಗಿದೆ.


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada