‘ಅನು’ ಸುಕೋ ಬ್ಯಾಂಕ್ ಪ್ರಚಾರ ರಾಯಭಾರಿ
- ಸಿನಿಡೆಸ್ಕ್, ದಟ್ಸ್ ಕನ್ನಡ
ಸುಕೋ ಬ್ಯಾಂಕ್‌ನ 10ನೇ ವಾರ್ಷಿಕೋತ್ಸವ ಸಮಾರಂಭವು ಜೂನ್ 24ರಂದು ಕೊಪ್ಪಳದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅನು ಪ್ರಭಾಕರ್ ಭಾಗವಹಿಸಲಿದ್ದಾರೆ ಎಂದು ಬ್ಯಾಂಕ್ ಅಧ್ಯಕ್ಷ ಮನೋಹರ್ ಮಸ್ಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಧ್ಯಕ್ಕೆ ‘ಸಾಹುಕಾರ’ ಚಿತ್ರದಲ್ಲಿ ಅಭಿನಯಿಸುತ್ತಿರುವ ಅನು ಪ್ರಭಾಕರ್, ಈವರೆವಿಗೆ ಅಭಿನಯಿಸಿದ ಎಲ್ಲ ಚಿತ್ರಗಳ ಎಲ್ಲ ಪಾತ್ರಗಳೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಪಾತ್ರ ಪೋಷಣೆಯಲ್ಲಿ ಅನುಭವಿ ಕಲಾವಿದೆಯಂತೆ ಕಾಣಿಸುವ ಅನು, ನಟನೆಯಲ್ಲಿ ನೀರಿನಂತೆ. ನೀರು ಯಾವ ಪಾತ್ರೆಗೆ ಹಾಕಿದರೂ ಹೇಗೆ ಆ ಪಾತ್ರೆಯ ಆಕಾರ ಪಡೆವುದೋ, ಅನು ಕೂಡ ಯಾವ ಪಾತ್ರ ನಿರ್ವಹಿಸಿದರೂ ಕೊಂಚವೂ ಪಾತ್ರಕ್ಕೆ ಧಕ್ಕೆಯಾಗದಂತೆ ನಟಿಸುವ ಸಾಮರ್ಥ್ಯ ಹೊಂದಿದ್ದಾಳೆಂದರೆ ಉತ್ಪ್ರೇಕ್ಷೆಯಾಗದು.
ಈಗಿನ ಕನ್ನಡದ ಚಿತ್ರರಂಗದಲ್ಲಿ ಪರಿಪೂರ್ಣ ನಟಿಮಣಿಗಿರಬೇಕಾದ ಎಲ್ಲವನ್ನೂ ತನ್ನೊಳಗೇ ತನ್ನದಾಗಿಸಿಕೊಂಡಿರುವ, ನಾಯಕಿಯಾಗಬೇಕೆಂದರೆ ತುಂಡುಡುಗೆ ತೊಡಲೇಬೇಕೆಂಬ ಗಾಂಧಿನಗರದ ಜನರ ‘ಪಾಲಿಸಿ’ಗೆ ಪ್ರತ್ಯುತ್ತರ ನೀಡಿದ್ದಾಳೆ ಈ ಅನು. ಒಂದು ಒಳ್ಳೆಯ ಪ್ರತಿಭೆಯನ್ನು ಎಷ್ಟು ಕೊಂಡಾಡಿದರೂ ತಪ್ಪಿಲ್ಲ. ‘ಐಟಂ ಸಾಂಗ್’ನ್ನೇ ಏನೋ ಭಾರಿ ಘನಂದಾರಿ ನಟನೆಯೆಂದೂ, ಐಟಂ ಸಾಂಗಲ್ಲಿ ತಮ್ಮೆಲ್ಲ ಅವಯವಗಳನ್ನೂ ಕುಲುಕಿಸುವುದೇ ಗ್ರೇಟ್ ಎನ್ನುವವರು, ಇಂಥವರನ್ನಾದರೂ ನೋಡಿ ಸ್ವಲ್ಪ ಕಲಿತರೆ ಒಳಿತು.
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications