»   » ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ರೇಖ

ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ರೇಖ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ತೆಲುಗಿಗೆ ಓಡಿರುವ ಬೆಂಗಳೂರಿನ ಜಿಂಕೆಮರಿ ‘ಚಿತ್ರ’ ರೇಖ ಇವತ್ತು ಅಲ್ಲಿ ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ಇಮೇಜಿಗೆ ಪಕ್ಕಾಗಿದ್ದಾಳೆ.

ತನ್ನ ತವರಿನವಳೇ ಆದ ರಕ್ಷಿತಾ ಕೊಡುತ್ತಿರುವ ಕಾಂಪಿಟಿಷನ್ನು ರೇಖ ಮಾರುಕಟ್ಟೆಯನ್ನು ಅಲ್ಲಿ ಕೊಂಚ ತಗ್ಗಿಸಿತು. ಆ ಕಾರಣಕ್ಕೇ ಯದ್ವಾತದ್ವಾ ಎಕ್ಸ್‌ಪೋಸ್‌ ಮಾಡೋದಿಲ್ಲ ಅಂತ ತಾನು ಮಾಡಿದ್ದ ಠರಾವನ್ನು ರೇಖ ಮುರಿದಿದ್ದಾಳೆ. ದೊಂಗುಡು ಎಂಬ ಹೊಸ ಚಿತ್ರದಲ್ಲಿ ಆಕೆಯ ಮಾದಕತೆ ಎಂಥವರನ್ನೂ ಮೂರ್ಛೆ ಹೋಗುವಂತೆ ಮಾಡುವ ಹಾಗಿದೆಯಂತೆ.

ಸೆಟ್ಟಿಗೆ ಅಮ್ಮ, ಅಪ್ಪ, ಬಾಯ್‌ಫ್ರೆಂಡು ಯಾರೊಬ್ಬರನ್ನೂ ಕರೆ ತರದ ಏಕೈಕ ತೆಲುಗು ನಾಯಕಿ ಎಂಬ ಖ್ಯಾತಿಗೂ ರೇಖ ಈಚೀಚೆಗೆ ಪಾತ್ರವಾಗಿದ್ದಾಳೆ. ಸಂಭಾವನೆಯ ಮಾತುಕತೆಯಿಂದ ಹಿಡಿದು ಕಾಲ್‌ಷೀಟ್‌ತನಕ ರೇಖ ತಂತಾನೇ ನಿರ್ಣಯ ಕೈಗೊಳ್ಳುತ್ತಾಳೆ. ಸೆಟ್ಟಿಗೆ ಯಾರನ್ನೂ ಕರೆ ತರದೆ ಒಬ್ಬಳೇ ಬಂದು, ಶೂಟಿಂಗ್‌ ಮುಗಿಸಿ ಹೋಗುತ್ತಾಳೆ. ಹೀಗಾಗಿ ನಿರ್ಮಾಪಕರಿಗೆ ನಾಯಕಿಯ ಪೇರೆಂಟ್ಸ್‌ಗೆ ಫೀಡ್‌ ಮಾಡುವ ತೊಂದರೆ ತಪ್ಪಿದೆ.

ನೀವಿನ್ನೂ ಚಿಕ್ಕವರಲ್ಲವೇ, ಒಬ್ಬರೇ ಸೆಟ್ಟಿಗೆ ಬಂದು, ಎಲ್ಲವನ್ನೂ ನಿಭಾಯಿಸಲು ಸಾಧ್ಯವೇ ಅಂತ ಕೇಳಿದರೆ, ರೇಖ ತಾನೊಬ್ಬ ವರ್ಕಿಂಗ್‌ ವುಮನ್‌ ಅಂತ ಪದೇಪದೇ ನೆನಪಿಸುತ್ತಾರೆ. ಒಂದು ಹೆಣ್ಣು ಆಫೀಸಿಗೆ ಅಪ್ಪ- ಅಮ್ಮನ್ನ ಕರೆದುಕೊಂಡು ಹೋಗುತ್ತಾಳಾ? ಹಾಗೆಯೇ ನಾನೂ ಇಂಡಿಪೆಂಡೆಂಟು ಅಂತ ಕಣ್ಣು ಹೊಡೆಯುತ್ತಾಳೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada