ಮುಂಬಯಿನಲ್ಲಿ ಡಾ.ರಾಜ್‌ಗೆ ಚಿಕಿತ್ಸೆ
ಮುಂಬಯಿ : ನಟ ಡಾ.ರಾಜ್‌ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ತಮ್ಮ ಆರೋಗ್ಯ ತಪಾಸಣೆಗಾಗಿ ನಗರದ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಡಾ.ಕೆ.ಗೋಯಲ್ ಅವರು ರಾಜ್ ದಂಪತಿಗಳ ಆರೋಗ್ಯ ತಪಾಸಣೆಯನ್ನು ಮಾಡುವರು. ರಾಜ್‌ಕುಮಾರ್ ಅವರನ್ನು ತಪಾಸಣೆ ಮಾಡಲು ಗುರುವಾರ ಲಾಸ್ ಏಂಜಲೀಸ್‌ನಿಂದ ವೈದ್ಯರ ತಂಡ ಆಗಮಿಸಲಿದೆ ಎಂದು ರಾಜ್ ಕುಟುಂಬ ಮೂಲಗಳು ತಿಳಿಸಿವೆ.
ತಜ್ಞ ವೈದ್ಯರಿಂದ ಫಿಸಿಯೋ ಥೆರಪಿ ಚಿಕಿತ್ಸೆ ಪಡೆದು ರಾಜ್‌ಕುಮಾರ್ ಶುಕ್ರವಾರ ನಗರಕ್ಕೆ ವಾಪಸಾಗುವ ನಿರೀಕ್ಷೆ ಇದೆ.
ಕೆಲವು ತಿಂಗಳ ಹಿಂದೆ ಚೆನ್ನೈನಲ್ಲಿ ಕೈಗೊಂಡ ಅವರ ಮಂಡಿ ಚಿಕಿತ್ಸೆ ಸಫಲವಾಗಿರಲಿಲ್ಲ. ಈ ಮಧ್ಯೆ ನೋವು ಹೆಚ್ಚಾದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಅವರು ಮುಂಬಯಿಗೆ ತೆರಳಿದ್ದಾರೆ. ಅವರೊಂದಿಗೆ ರಾಘವೇಂದ್ರ ರಾಜ್‌ಕುಮಾರ್ ಮತ್ತು ರಾಜ್ ಕುಟುಂಬದ ವೈದ್ಯರಾದ ಡಾ.ರಮಣ ಅವರು ಮುಂಬಯಿನಲ್ಲಿ ತಂಗಿದ್ದಾರೆ.
(ಏಜನ್ಸೀಸ್)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications