»   » ಬಿಗ್ ಬ್ರದರ್ ಗೆದ್ದ ಶಿಲ್ಪಾಶೆಟ್ಟಿಗೆ ಲೀಡ್ಸ್ ವಿವಿ ಡಾಕ್ಟರೇಟ್

ಬಿಗ್ ಬ್ರದರ್ ಗೆದ್ದ ಶಿಲ್ಪಾಶೆಟ್ಟಿಗೆ ಲೀಡ್ಸ್ ವಿವಿ ಡಾಕ್ಟರೇಟ್

Subscribe to Filmibeat Kannada


ಲಂಡನ್, ಜುಲೈ 18 : ಸಾಂಸ್ಕೃತಿಕ ವೈವಿಧ್ಯತೆಯನ್ನು ಹರಡುವ ಕಾಯಕದಲ್ಲಿ ತೊಡಗಿದ್ದಾರೆ ಎಂಬ ಕಾರಣಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಪ್ರಖ್ಯಾತ ಲೀಡ್ಸ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಿದೆ.

ಮಂಗಳೂರು ಮೂಲದ 32 ವರ್ಷದ ಶಿಲ್ಪಾ ಶೆಟ್ಟಿ, ಬಿಗ್ ಬ್ರದರ್ ರಿಯಾಲಿಟಿ ಶೋನಲ್ಲಿ ಇತ್ತೆನ್ನಲಾದ ವರ್ಣಬೇಧ ಕಿರುಕುಳದ ವಿರುದ್ಧ ಸಂಯಮದಿಂದ ಹೋರಾಟ ನಡೆಸಿದರು ಎಂದು ಲೀಡ್ಸ್ ವಿವಿಯ ವಕ್ತಾರರು ಹೇಳಿದ್ದಾರೆ.

ಲೀಡ್ಸ್ ವಿವಿಯ ಗೌರವ ಡಾಕ್ಟರೇಟ್ ಪಡೆದ ಹಿಂದಿ ಚಿತ್ರರಂಗದ ಕಿರಿಯ ಕಲಾವಿದೆ ಎಂಬ ಪ್ರಶಂಸೆಗೂ ಶಿಲ್ಪಾ ಪಾತ್ರರಾಗಲಿದ್ದಾರೆ. ಈ ಮುಂಚೆ ಈ ಗೌರವಕ್ಕೆ ಅಮಿತಾಬ್ ಬಚ್ಚನ್, ಶಬಾನಾ ಆಜ್ಮಿ ಹಾಗೂ ಯಶ್ ಛೋಪ್ರಾ ಪಾತ್ರರಾಗಿದ್ದರು.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada