»   » ತಲ್ಲಂ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನ ಭರ್ತಿ

ತಲ್ಲಂ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನ ಭರ್ತಿ

Posted By: Staff
Subscribe to Filmibeat Kannada

ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ.ವಿ.ಚಂದ್ರಶೇಖರ್‌ ಆಯ್ಕೆಯಾಗಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ತುರ್ತು ಸಭೆ ಚಂದ್ರಶೇಖರ್‌ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

ನಿರ್ಮಾಪಕರಿಗೆ ನ್ಯಾಯ ದೊರಕಿಸಿಕೊಡಲು ವಿಫಲರಾದ ಹಿನ್ನೆಲೆಯಲ್ಲಿ ತಲ್ಲಂ ನಂಜುಂಡ ಶೆಟ್ಟಿ ಅವರು ರಾಜೀನಾಮೆ ನೀಡಿದ್ದರಿಂದ ಮಂಡಳಿಯ ಅಧ್ಯಕ್ಷ ಸ್ಥಾನ ತೆರವಾಗಿತ್ತು . ತೆರವಾದ ಸ್ಥಾನದಲ್ಲಿ ಈವರೆಗೂ ಮಂಡಳಿಯ ಉಪಾಧ್ಯಕ್ಷರಾಗಿದ್ದ ಚಂದ್ರಶೇಖರ್‌ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಯಿತು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಪ್ರದರ್ಶಕರು ಹಾಗೂ ನಿರ್ಮಾಪಕ ವಲಯಗಳ ನಡುವೆ ಉದ್ಭವಿಸಿದ್ದ ಸಂಘರ್ಷವನ್ನು ಪರಿಹರಿಸಲಾಗದ ಕಾರಣ ತಲ್ಲಂ ನಂಜುಂಡಶೆಟ್ಟಿ ರಾಜೀನಾಮೆ ನೀಡಿದ್ದರು. ಆನಂತರ ಥಿಯೇಟರ್‌ ಮಾಲೀಕರ ವಿರುದ್ಧ ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು ಭಾರೀ ಪ್ರತಿಭಟನೆ ನಡೆಸಿದ್ದರು. ಸರ್ಕಾರದ ಮಧ್ಯ ಪ್ರವೇಶದಿಂದ ಥಿಯೇಟರ್‌ ಮಾಲೀಕರ್‌ ಥಿಯೇಟರ್‌ ಬಾಡಿಗೆಯನ್ನು ಶೇ.10 ರಷ್ಟು ಕಡಿತಗೊಳಿಸಲು ಒಪ್ಪಿಕೊಂಡ ನಂತರ ಪ್ರತಿಭಟನೆ ತಣ್ಣಗಾಗಿತ್ತು.(ಇನ್ಫೋ ವಾರ್ತೆ)

English summary
K.V.Chandrashekhar is the new president of Karnataka Film Chamber of Commerce

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada