»   » ಸದಾಶಿವನಗರ ಬಂಗಲೆಯಲ್ಲಿ ಧರ್ಮಸಿಂಗ್‌!

ಸದಾಶಿವನಗರ ಬಂಗಲೆಯಲ್ಲಿ ಧರ್ಮಸಿಂಗ್‌!

Posted By: Staff
Subscribe to Filmibeat Kannada

  • ದಟ್ಸ್‌ಕನ್ನಡ ಬ್ಯೂರೊ

ಸದಾಶಿವನಗರದ ವರನಟ ರಾಜ್‌ಕುಮಾರ್‌ ಬಂಗಲೆಯಲ್ಲಿ ಬುಧವಾರ (ಆ.18) ಕಲರವ. ಅಣ್ಣಾವ್ರ ಭೇಟಿಗಾಗಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಖುದ್ದು ಬಂಗಲೆಗೆ ಆಗಮಿಸಿದ್ದರು. ಮೇರುನಟ ಹಾಗೂ ಮುಖ್ಯಮಂತ್ರಿಯ ಭೇಟಿ ನೆರೆದವರಲ್ಲಿ ಪುಳಕ ಉಂಟು ಮಾಡಿತ್ತು .

ರಾಜ್‌ ದಂಪತಿಗಳಿಗೆ ಪುಷ್ಪಗುಚ್ಛ ನೀಡಿ ಅಭಿಮಾನ ಸೂಚಿಸಿದ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಇತ್ತೀಚೆಗಷ್ಟೇ ಹೃದಯಬೇನೆಗೆ ತುತ್ತಾಗಿದ್ದ ರಾಜ್‌ಕುಮಾರ್‌ ಕ್ಷೇಮಸಮಾಚಾರ ವಿಚಾರಿಸಿದರು.

ಕನ್ನಡ ಚಿತ್ರೋದ್ಯಮದಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ರಾಜ್‌ ನಡುವಣ ಮಾತುಕತೆ ಮಹತ್ವ ಪಡೆದಿತ್ತು . ಸುಮಾರು ಅರ್ಧ ತಾಸು ಮಾತುಕತೆ ನಡೆಯಿತು. ಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಅತ್ಯಂತ ತ್ವರಿತವಾಗಿ ಪರಿಹಾರ ಒದಗಿಸುವುದಾಗಿ ಮಾತುಕತೆಯ ಸಂದರ್ಭದಲ್ಲಿ ಧರ್ಮಸಿಂಗ್‌ ಆಶ್ವಾಸನೆ ನೀಡಿದರು.

ಚಿತ್ರೋದ್ಯಮದ ಸಮಸ್ಯೆಗಳ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ನೇಮಿಸಿರುವ ಸಮಿತಿ ವರದಿ ನೀಡುವವರೆಗೂ ಪರಭಾಷೆಗಳ ಹೊಸಚಿತ್ರಗಳನ್ನು 7 ವಾರಗಳವರೆಗೆ ರಾಜ್ಯದಲ್ಲಿ ತೆರೆ ಕಾಣಲು ಅವಕಾಶ ಮಾಡಿಕೊಡಬಾರದು ಎಂದು ರಾಜ್‌ ಮುಖ್ಯಮಂತ್ರಿಗೆ ಮನವಿ ಮಾಡಿದರು. ಈ ಸಂಬಂಧ ಮನವಿಪತ್ರವನ್ನೂ ಧರ್ಮಸಿಂಗ್‌ರಿಗೆ ಸಲ್ಲಿಸಲಾಯಿತು.

ಪಾರ್ವತಮ್ಮ ರಾಜ್‌ಕುಮಾರ್‌, ರವಿಚಂದ್ರನ್‌, ಜಗ್ಗೇಶ್‌, ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ಪುನೀತ್‌, ರಾಘವೇಂದ್ರ ರಾಜ್‌ಕುಮಾರ್‌, ರಾಕ್‌ಲೈನ್‌ ವೆಂಕಟೇಶ್‌, ಬಸಂತಕುಮಾರ್‌ ಪಾಟೀಲ್‌, ಕನಕಪುರ ಶ್ರೀನಿವಾಸ್‌, ಜೋಸೈಮನ್‌, ತಿಪಟೂರು ರಘು ಮುಂತಾದವರು ಧರ್ಮಸಿಂಗ್‌ ಭೇಟಿಯ ಸಂದರ್ಭದಲ್ಲಿ ಹಾಜರಿದ್ದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

English summary
Dhram Singh meets Dr. Rajkumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada