ಹಂಸಲೇಖ ಸಂಭಾವನೆ ಕೇವಲ ಒಂದೂವರೆ ರೂಪಾಯಿ!
ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು, ರಜನಿಕಾಂತ್ ಮತ್ತು ಪ್ರಕಾಶ್ ರೈ ಅಭಿನಯಿಸಿದ ಕತೆ ಹಳೆಯದು. ನಮ್ಮ ಹಂಸಲೇಖ ಕೇವಲ ಒಂದೂವರೆ ರೂಪಾಯಿ ಸಂಭಾವನೆ ಪಡೆದು ಸಂಗೀತ ನೀಡಿದ ಕತೆಯನ್ನು ಈಗ ಓದಿ. ನಮ್ಮ ಕನ್ನಡಿಗರ ಇಂಥ ಒಳ್ಳೆ ಬುದ್ಧಿಗೆ ಭೇಷ್ ಅನ್ನಿ.
ನಿರ್ದೇಶಕ ಶಿವರುದ್ರಯ್ಯ ದಾಟು ಚಿತ್ರ ಮಾಡುತ್ತಿದ್ದರು. ಅವರಿಗೆ ತಮ್ಮ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರೆ ಚೆನ್ನಾಗಿತ್ತು ಎಂಬ ಆಸೆಯಿತ್ತು. ಆದರೆ ಹಂಸಲೇಖ ಎಷ್ಟು ಹಣ ಕೇಳ್ತಾರೋ ಅನ್ನೋ ಭಯದಿಂದ, ದೂರವೇ ನಿಂತಿದ್ದರು. ಈ ವಿಚಾರ ಅದು ಹೇಗೋ ಹಂಸಲೇಖಾಗೆ ಗೊತ್ತಾಯಿತು.
ಸಮಾರಂಭವೊಂದರಲ್ಲಿ ಹಂಸಲೇಖ ಸಂಗೀತ ನೀಡಲು ಸಿದ್ಧವಿರುವುದಾಗಿ ಹೇಳಿಯೇ ಬಿಟ್ಟರು. ಸಂಭಾವನೆ ಬಗ್ಗೆ ಶಿವರುದ್ರಯ್ಯ ಅಳುಕುತ್ತಲೇ ಮುಖ ನೋಡಿದರು. ಆಗ ಅವರ ಜೇಬಲ್ಲಿ ಇದ್ದದ್ದು ಕೇವಲ ಒಂದೂವರೆ ರೂಪಾಯಿ.
ನನಗೆ ಒಂದೂವರೆ ರೂಪಾಯಿಯೇ ಸಾಕು. ಒಂದೇ ಕಂತಲ್ಲಿ ಆ ಹಣ ಕೊಡು ಎಂದು ಹಂಸಲೇಖ ಕೇಳಿದರು. ಸಂಗೀತ ನೀಡಲು ಒಪ್ಪಿದ ಹಂಸಲೇಖ, ಎಲ್ಲರಿಗಿಂತಲೂ ದೊಡ್ಡವರಾದರು.


Click it and Unblock the Notifications