»   » ಜನ್ಮದಿನದ ಖುಷಿಯಲ್ಲಿ ವಿಷ್ಣುವರ್ಧನ್‌, ಉಪೇಂದ್ರ, ಶ್ರುತಿ

ಜನ್ಮದಿನದ ಖುಷಿಯಲ್ಲಿ ವಿಷ್ಣುವರ್ಧನ್‌, ಉಪೇಂದ್ರ, ಶ್ರುತಿ

Subscribe to Filmibeat Kannada

ಬೆಂಗಳೂರು : ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮವನ್ನು, ಅಭಿಮಾನಿಗಳು ಸೋಮವಾರ(ಸೆ.18) ಹಂಚಿಕೊಂಡರು.

ಉಪೇಂದ್ರ ಅವರ ವಿಚಿತ್ರ ಹೆಸರಿನ ‘ರುಪ್ಪೀಸ್‌’ ಎಂಬ ಹೋಟೆಲ್‌ ಮತ್ತು ರೆಸಾರ್ಟ್‌ ಸಮುಚ್ಛಯ ಹುಟ್ಟುಹಬ್ಬದ ಸಂದರ್ಭದಲ್ಲಿಯೇ, ಇಂದು ಸಂಜೆ ಉದ್ಘಾಟನೆಗೊಳ್ಳಲಿದೆ. ನಗರದ ಹೊರವಲಯ(ದೊಡ್ಡ ಆಲದ ಮರ)ದಲ್ಲಿ ರುಪ್ಪೀಸ್‌ ಸೇವೆ ಆರಂಭಿಸಲಿದೆ.

‘ಐಶ್ವರ್ಯ’ ಚಿತ್ರಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಲ್ಲಿರುವ ಉಪೇಂದ್ರ, ತಮ್ಮ ನೆಚ್ಚಿನ ಕೆಲಸವಾದ ನಿರ್ದೇಶನವನ್ನು 2007ರಲ್ಲಿ ಮತ್ತೆ ಆರಂಭಿಸುವುದಾಗಿ ಹೇಳಿದ್ದಾರೆ.

ವಿಷ್ಣು ಜನ್ಮದಿನವೂ ಇಂದೇ : ನಟ ವಿಷ್ಣುವರ್ಧನ್‌, ತಮ್ಮ ಅಭಿಮಾನಿಗಳಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸುತ್ತಿದ್ದಾರೆ. ವಂಶವೃಕ್ಷದಿಂದ ಬಣ್ಣದ ಬದುಕು ಆರಂಭಿಸಿ, ನಾಗರಹಾವು ಮೂಲಕ ನಾಯಕ ನಟರಾದ ವಿಷ್ಣು ಈವರೆಗೆ 180ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಸಿರಿವಂತ, ಏಕದಂತ, ಮಾತಾಡ್‌ ಮಾತಾಡ್‌ ಮಲ್ಲಿಗೆ ಚಿತ್ರಗಳು ಬಿಡುಗಡೆಗೊಳ್ಳಬೇಕಿವೆ.

ಅಂದ ಹಾಗೇ, ನಟಿ ಶ್ರುತಿ ಹುಟ್ಟಿದ ದಿನವೂ ಸೆಪ್ಟೆಂಬರ್‌ ಹದಿನೆಂಟೇ ಆಗಿರುವುದು ಇನ್ನೊಂದು ವಿಶೇಷ.

(ದಟ್ಸ್‌ ಕನ್ನಡ ವಾರ್ತೆ)

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada