»   » ರಾಮ್ ಗೋಪಾಲ್ ವರ್ಮಾ ನಿರ್ದೇಶಕ; ಸುದೀಪ್ ನಾಯಕ!

ರಾಮ್ ಗೋಪಾಲ್ ವರ್ಮಾ ನಿರ್ದೇಶಕ; ಸುದೀಪ್ ನಾಯಕ!

Posted By: Staff
Subscribe to Filmibeat Kannada

ಬೆಂಗಳೂರು, ಅ.18 : ಬಾಲಿವುಡ್ ಹೆಸರಾಂತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕನ್ನಡ ಚಿತ್ರ ಒಂದನ್ನು ನಿರ್ದೇಶಿಸಲಿದ್ದಾರೆ. ನಾಯಕ ನಟನಾಗಿ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಎರಡು ತಿಂಗಳಿಂದ ಮಾತುಕತೆ ನಡೆಯುತ್ತಿದೆ. ಈಗ ಅಂತಿಮ ಹಂತ ತಲುಪಿದೆ. ಮೈ ಆಟೋಗ್ರಾಫ್‌ನ್ನು ಹಿಂದಿಯಲ್ಲಿ ಮಾಡುತ್ತಿರುವ ವರ್ಮಾ ಅವರನ್ನು ಕನ್ನಡಕ್ಕೆ ಒಂದು ಚಿತ್ರ ಮಾಡಿ ಎಂದಾಗ ಅವರು ಒಪ್ಪಿದರು. ಥ್ರಿಲ್ಲರ್ ಕತೆಯನ್ನು ಹೊಂದಿರುವ ಸಿನಿಮಾದ ಚಿತ್ರೀಕರಣವು ನವಂಬರ್‌ನಲ್ಲಿ ಆರಂಭವಾಗಲಿದೆ. ಪ್ರಸ್ತುತ ನಾನು 'ಕಾಮಣ್ಣನ ಮಕ್ಕಳು" ಚಿತ್ರೀಕರಣದಲ್ಲಿ ಇದ್ದೇನೆ. ಅದರ ಚಿತ್ರೀಕಣ ಮುಗಿದ ಕೂಡಲೆ ವರ್ಮಾ ಕನ್ನಡಕ್ಕೆ ಬರಲಿದ್ದಾರೆ  ಎಂದು ಸುದೀಪ್, ಸುದ್ದಿಗಾರರಿಗೆ ತಿಳಿಸಿದ್ದಾರೆ.

ತೆಲುಗು ಚಿತ್ರರಂಗದಿಂದ ಬಾಲಿವುಡ್‌ಗೆ ಹೋಗಿ ಅಲ್ಲಿ ಒಂದಷ್ಟು ಹೆಸರು ಗಳಿಸಿ, ಒಂಚೂರು ಕೆಸರನ್ನೂ  ಮೆತ್ತಿಸಿಕೊಂಡವರು ವರ್ಮಾ. ಈಗ ಬಾಲಿವುಡ್ ಬೆಡಗಿಗಿಂತಲೂ ಸ್ಯಾಂಡಲ್‌ವುಡ್‌ನ ಸೊಗಡು ವರ್ಮಾರನ್ನು ಇತ್ತ ಸೆಳೆದಿರಬಹುದೆ?
 
(ದಟ್ಸ್‌ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada