»   » ಕಣ್‌ಕುಕ್ಕುವಂತಿರುವ ಮಾನ್ಯ, ಅಂಧರಿಗೆ ಕಣ್ಣು ಕೊಡ್ತಾಳೆ!

ಕಣ್‌ಕುಕ್ಕುವಂತಿರುವ ಮಾನ್ಯ, ಅಂಧರಿಗೆ ಕಣ್ಣು ಕೊಡ್ತಾಳೆ!

Subscribe to Filmibeat Kannada


ಮೊನ್ನೆ ನಟಿ ಮಾನ್ಯಗೆ ಹುಟ್ಟುಹಬ್ಬದ ಸಂಭ್ರಮ. ಇದು ಎಷ್ಟನೆಯ ಹುಟ್ಟುಹಬ್ಬ ಎಂದು ಕೇಳುವಂತಿಲ್ಲ.. ಆದರೆ ಹುಟ್ಟುಹಬ್ಬದ ದಿನ ಅವರು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಅಂದರೆ, ತಮ್ಮ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಆ ಮೂಲಕ ಇನ್ನಷ್ಟು ಮಂದಿಯ ಕಣ್ಣು ತೆರೆಸಿದ್ದಾರೆ.

ಮರಣಾನಂತರ ಕಣ್ಣು ದಾನ ಮಾಡುವ ನಿರ್ಣಯ ಅಚಲ. ಈ ವರ್ಷದ ಹುಟ್ಟುಹಬ್ಬವನ್ನು ಸ್ಮರಣೀಯಗೊಳಿಸಲು ಈ ನಿರ್ಧಾರ ಕೈಗೊಂಡಿದ್ದಾಗಿ ಮಾನ್ಯ ಹೇಳಿದ್ದಾರೆ.

ನಗರಕ್ಕೆ ಆಗಮಿಸಿದ್ದ ಅವರು, ಪತ್ರಕರ್ತರು ಮತ್ತು ಅಂಧ ಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬದ ಸವಿಯನ್ನು ಹಂಚಿಕೊಂಡರು. ಊಟ ಮಾಡಿದರು. ಮನಬಿಚ್ಚಿ ಮಾತನಾಡಿದರು.

ವರ್ಷ, ಶಾಸ್ತ್ರಿ, ಅಂಬಿ, ಸುಂಟರಗಾಳಿ, ಬೆಳ್ಳಿಬೆಟ್ಟ ಚಿತ್ರದ ಮೂಲಕ ಗಮನ ಸೆಳೆದವರು ಮಾನ್ಯ. ಗಮನಾರ್ಹ ಅಭಿನಯದ ಜೊತೆಗೆ ಐಟಂ ಸಾಂಗ್‌ ಮೂಲಕವೂ ಗಮನ ಸೆಳೆದವರು. ಈಗ ತೆನೆಮನೆ ಸುಬ್ರಹ್ಮಣ್ಯ ನಿರ್ದೇಶನದ ‘ಪ್ರೀತಿ ಒಂಥರಾ’ ಸೇರಿದಂತೆ ಐದು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಕನ್ನಡ ಪ್ರೇಕ್ಷಕರು ನನ್ನನ್ನು ಒಪ್ಪಿಕೊಂಡಿದ್ದಾರೆ. ನಾನವರನ್ನು ಕೃತಜ್ಞತೆಯಿಂದ ಅಪ್ಪಿಕೊಂಡಿದ್ದೇನೆ’ ಎನ್ನುವ ಮಾನ್ಯಗೆ, ಸ್ಯಾಂಡಲ್‌ವುಡ್‌ನಲ್ಲಿ ಅವಕಾಶಗಳ ಕಿಟಕಿ ತೆರೆದುಕೊಂಡಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada