»   » ಶ್ಯಾಮ್‌ ಬೆನಗಲ್‌ ಹೊಸ ಸಿನಿಮಾ ನೇತಾಜಿ ಈಸ್‌ ಆನ್‌ ದಿ ವೇ...

ಶ್ಯಾಮ್‌ ಬೆನಗಲ್‌ ಹೊಸ ಸಿನಿಮಾ ನೇತಾಜಿ ಈಸ್‌ ಆನ್‌ ದಿ ವೇ...

Posted By: Staff
Subscribe to Filmibeat Kannada

ಶ್ಯಾಮ್‌ ಬೆನಗಲ್‌ !
ಭಾರತೀಯ ಚಿತ್ರರಂಗದಲ್ಲಿ ಅದರಲ್ಲಿಯೂ ಹೊಸ ಅಲೆಯ ಚಿತ್ರಗಳ ಪಿತಾಮಹ ಅಂತಲೇ ಗುರುತಿಸಿಕೊಂಡವರು. ನೂತನ ಪ್ರಯೋಗವೊಂದಕ್ಕೆ ಕೈ ಹಾಕಿದ್ದಾರೆ. ಅದು ನೇತಾಜಿ ಸುಭಾಷ್‌ಚಂದ್ರ ಭೋಸ್‌ ಅವರ ಜೀವನದ ಬಗಿಗನ ಹೊಸ ಸಿನಿಮಾ.

ನೇತಾಜಿ ಸತ್ತಿದ್ದಾರೆಯೇ... ಎಂಬುದೇ ಹಲವು ವರ್ಷಗಳ ಕಾಲ ಪ್ರಶ್ನೆಯಾಗಿ ಉಳಿದಿತ್ತು. ಈಗ ನೇತಾಜಿ ಹೇಗೆ ಸತ್ತರು...?, ವಿಮಾನ ಅಪಘಾತದಲ್ಲಿಯೇ ಸತ್ತದ್ದು ಹೌದಾ... ಎಂಬ ಪ್ರಶ್ನೆಗಳೆಲ್ಲಾ ಕುತೂಹಲಿಗರ ಮುಂದಿದೆ.

ನೇತಾಜಿ ಕುಟುಂಬದವರೂ ಈ ಬಗ್ಗೆ ಅನ್ವೇಷಣೆಯಲ್ಲಿ ಮುಳುಗಿದ್ದಾರೆ. ಹೀಗೆ ದಂತ ಕತೆಯಾಗಿರುವ ನೇತಾಜಿ ಬದುಕಿನ ಮೇಲೆ ಸಿನಿಮಾ ತೆಗೆಯುವ ಬೆನಗಲ್‌ ಕಾಯಕ ಮುಂದಿನ ತಿಂಗಳಿನಲ್ಲಿ ಶುರುವಾಗಲಿದೆ. ಮುಂದಿನ ವರ್ಷ ಜೂನ್‌ ತಿಂಗಳ ಹೊತ್ತಿಗೆ ಈ ಸಿನಿಮಾ ರಿಲೀಸ್‌ ಆಗಬಹುದು ಎಂಬುದು ಬೆನಗಲ್‌ ಲೆಕ್ಕಾಚಾರ.

ಜರ್ಮನಿ, ಕಝಕಿಸ್ಥಾನ್‌, ಬರ್ಮಾ ಹಾಗೂ ಜಪಾನ್‌ನ ಆಸುಪಾಸಿನಲ್ಲಿ ಸಿನಿಮಾ ಶೂಟಿಂಗ್‌ ನಡೆಯುತ್ತದೆ. ನೇತಾಜಿ ಅವರದು ರೋಮಾಂಚನಗೊಳಿಸುವ ಸಾಹಸೀ ಕತೆ. ಅದರಲ್ಲಿಯೂ ಅವರ ಕೊನೆಯ ಐದು ವರ್ಷಗಳ ಬದುಕಿನ ಬಗ್ಗೆಯೇ ಸಿನಿಮಾ ಕತೆ ಸುತ್ತುತ್ತದೆ. ನೇತಾಜಿ ಕಲ್ಕತ್ತಾದಿಂದ ತಲೆ ಮರೆಸಿಕೊಂಡು ಹೋಗಿದ್ದರಿಂದ ಹಿಡಿದು 80 ಸಾವಿರ ಸೈನಿಕರ ಆಜಾದ್‌ ಹಿಂದ್‌ ಪೌಜ್‌ ಸೈನ್ಯವನ್ನು ಕಟ್ಟಿರುವವರೆಗೆ ಸಿನಿಮಾ ಕತೆ ಸಾಗುತ್ತದೆ.

ಸಿನಿಮಾ ಹೀರೋ ಯಾರೆಂಬುದು ಇನ್ನೂ ನಿರ್ಧಾರವಾಗಿಲ್ಲ. ಅಂದ ಹಾಗೆ ಹೊಸ ಸಿನಿಮಾ ತೆಗೆಯುತ್ತಿರುವ ಈ ವಿಷಯವನ್ನು ಬೆನಗಲ್‌ ಪ್ರಕಟಿಸಿದ್ದು ಲಂಡನ್‌ನಲ್ಲಿ. ಸಂಗೀತಾ ದತ್ತಾ ಅವರು ಬರೆದಿರುವ ಶ್ಯಾಮ್‌ ಬೆನಗಲ್‌ ಎಂಬ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ.(ಪಿಟಿಐ)

English summary
Shyam Benegal to produce feature film on Netaji
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada