»   » ತಮಿಳು ನಟ ಧನುಷ್‌ ಜೊತೆ ರಜನಿಕಾಂತ್‌ ಪುತ್ರಿ ಐಶ್ವರ್ಯಾ ಮದುವೆ

ತಮಿಳು ನಟ ಧನುಷ್‌ ಜೊತೆ ರಜನಿಕಾಂತ್‌ ಪುತ್ರಿ ಐಶ್ವರ್ಯಾ ಮದುವೆ

Posted By: Super
Subscribe to Filmibeat Kannada

ಚೆನ್ನೈ : ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ಹಾಗೂ ಉದಯೋನ್ಮುಖ ನಟ ಧನುಷ್‌ರ ವಿವಾಹ ಗುರುವಾರ ಅದ್ದೂರಿಯಾಗಿ ನಡೆಯಿತು.

ಚೆನ್ನೈನಲ್ಲಿನ ರಜನಿಕಾಂತ್‌ರ ಬಂಗಲೆಯಲ್ಲಿ ನ.18ರ ಗುರುವಾರ ಬೆಳಗ್ಗೆ ತಾರಾವರ್ಚಸ್ಸಿನ ಐಶ್ವರ್ಯಾ ಹಾಗೂ ಧನುಷ್‌ರ ಮದುವೆ ನಡೆಯಿತು. ಹಿಂದೂ ವಿಧಿಯಲ್ಲಿ ನಡೆದ ಈ ಮದುವೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಾಜರಿದ್ದರು.

ಕನ್ನಡದ ಅಂಬರೀಷ್‌, ಕಮಲಹಾಸನ್‌, ಸತ್ಯರಾಜ್‌, ಹೇಮಾ ಮಾಲಿನಿ, ಶತ್ರುಜ್ಞ ಸಿನ್ಹ , ಮೋಹನ್‌ಬಾಬು, ಚಿರಂಜೀವಿ, ಕೆ. ಬಾಲಚಂದರ್‌, ಇಳಯರಾಜಾ, ಭಾರತೀರಾಜ, ಸೂರ್ಯ ಮುಂತಾದ ಸಿನಿಮಾರಂಗದ ದಿಗ್ಗಜರು ಮದುವೆ ಸಮಾರಂಭದಲ್ಲಿ ಹಾಜರಿದ್ದು ವಧುವರರಿಗೆ ಶುಭಕೋರಿದರು.

ಹಿಂದೊಮ್ಮೆ ರಜನಿಕಾಂತ್‌ರಿಗೆ ಆಪ್ತರಾಗಿದ್ದ ಡಿಎಂಕೆ ವರಿಷ್ಠ ಕರುಣಾನಿಧಿಯವರ ಗೈರುಹಾಜರಿ ಮದುವೆಯಲ್ಲಿ ಎದ್ದು ಕಾಣುತ್ತಿತ್ತು . ಕರುಣಾನಿಧಿ ಅವರ ಮನೆಗೆ ರಜನಿ ಹಾಗೂ ಅವರ ಪತ್ನಿ ಲತಾ ಖುದ್ದು ತೆರಳಿ ಆಹ್ವಾನ ನೀಡಿದ್ದರು.

(ಏಜನ್ಸೀಸ್‌)

English summary
Rajnis daughter Aishwarya weds Tamil actor Dhanush

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada