»   » ‘ಮೌರ್ಯ’ ನಾಯಕಿ ಮೀರಾ ಜಾಸ್ಮಿನ್‌ ಮದುವೆ?

‘ಮೌರ್ಯ’ ನಾಯಕಿ ಮೀರಾ ಜಾಸ್ಮಿನ್‌ ಮದುವೆ?

Subscribe to Filmibeat Kannada


ಜಾಸ್ಮಿನ್‌ ಕೈಹಿಡಿಯುತ್ತಿರುವ ವರಮಹಾಶಯ; ಎಸ್‌.ಜೆ.ಸೂರ್ಯ. ಈತ ತಮಿಳು ನಟ ಮತ್ತು ನಿರ್ದೇಶಕ.

ಪ್ರೀತಿಯ ಜಾಲದಲ್ಲಿ ತಾರಾಜೋಡಿಗಳು ಬೀಳುತ್ತಿವೆ. ಅದರಲ್ಲೂ ಈ ವರ್ಷ ಒಬ್ಬರಾದ ಮೇಲೆ ಒಬ್ಬರು, ಹಠಕ್ಕೆ ಬಿದ್ದವರಂತೆ ನಟಿಯರು ಮದುವೆಗೆ ಆತುರ ತೋರಿಸಿದ್ದಾರೆ. ಜ್ಯೋತಿಕಾ, ಉಮಾಶಂಕರಿ, ವಿಜಯಲಕ್ಷ್ಮಿ ನಂತರ ಈಗ ಮೀರಾ ಜಾಸ್ಮಿನ್‌ ಸರತಿ!

ಜಾಸ್ಮಿನ್‌ ಕೈಹಿಡಿಯುತ್ತಿರುವ ವರಮಹಾಶಯ; ಎಸ್‌.ಜೆ.ಸೂರ್ಯ. ಈತ ತಮಿಳು ನಟ ಮತ್ತು ನಿರ್ದೇಶಕ. ಈ ಹಿಂದೆ ನೀಲಾ ಮತ್ತು ಭೂಮಿಕಾ ನಡುವೆ ಸೂರ್ಯ ಹೆಸರನ್ನು ತಳಕು ಹಾಕಿ, ಪತ್ರಕರ್ತರು ತಮ್ಮ ಚಪಲ ತೀರಿಸಿಕೊಂಡಿದ್ದರು. ಈಗ ಮೀರಾ ಜಾಸ್ಮಿನ್‌ಳ ಕೈಹಿಡಿಯಲು ಸೂರ್ಯ ಹೊರಟಿದ್ದಾನೆ. ಮದುವೆ ಖಚಿತ ಎಂದು ಪತ್ರಿಕೆಗಳು ಪಿಸುಗುಟ್ಟುತ್ತಿವೆ. ಅಲ್ಲದೇ ಸಿನಿ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ. ಮದುವೆ ನಿಶ್ಚಿತಾರ್ಥವೂ ನೆರವೇರಿದೆ ಎನ್ನಲಾಗಿದೆ.

ಈ ಬಗ್ಗೆ ಮೀರಾ ಏನನ್ನೂ ಹೇಳಿಲ್ಲ.. ಆದರೆ ಸೂರ್ಯ ‘ಎಲ್ಲವೂ ಸುಳ್ಳು... ನಮ್ಮಿಬ್ಬರ ನಡುವೆ ಕೇವಲ ಸ್ನೇಹವಿದೆ. ಪತ್ರಿಕೆಗಳು ಇಲ್ಲದ ಕತೆ ಹುಟ್ಟಿಸಿವೆ’ ಎಂದಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅಭಿನಯದ ‘ಮೌರ್ಯ’ ಚಿತ್ರದಲ್ಲಿ ಮೀರಾ ಪ್ರಬುದ್ಧ ಅಭಿನಯದಿಂದ ಮಿಂಚಿದ್ದರು. ಆ ಮೂಲಕ ಸ್ಯಾಂಡಲ್‌ವುಡ್‌ ಪ್ರೇಕ್ಷಕರಿಗೆ ಅವರು ಪರಿಚಿತರು. ಈಗ ಪುನೀತ್‌ರೊಂದಿಗೆ ಹೊಸ ಚಿತ್ರ ‘ಅರಸು’ದಲ್ಲಿಯೂ ಮೀರಾ ನಟಿಸುತ್ತಿದ್ದಾರೆ. ಇದೇ ಅವರ ಕೊನೆಯ ಕನ್ನಡ ಚಿತ್ರವಾಗಲಿದೆಯೆ? ‘ಪದಮ್‌ ಒನ್ನು ಒರು ವಿಲಾಪಂ’ ಚಿತ್ರಕ್ಕೆ ಮೀರಾ ಜಾಸ್ಮಿನ್‌ 2004ರಲ್ಲಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada