»   » ‘ಬೆಳದಿಂಗಳ ಬಾಲೆ’ ನಿರ್ಮಾಪಕ ಮುರಳಿ ನಿಧನ

‘ಬೆಳದಿಂಗಳ ಬಾಲೆ’ ನಿರ್ಮಾಪಕ ಮುರಳಿ ನಿಧನ

Posted By: Staff
Subscribe to Filmibeat Kannada

ಬೆಂಗಳೂರು : ಸುನಿಲ್‌ಕುಮಾರ್‌ ದೇಸಾಯಿ ನಿರ್ದೇಶನದ ಯಶಸ್ವಿ ಚಿತ್ರ 'ಬೆಳದಿಂಗಳ ಬಾಲೆ" ನಿರ್ಮಾಪಕರಲ್ಲೊಬ್ಬರಾದ ಮುರಳಿ ಭಾನುವಾರ (ನ.17) ನಸುಕಿನಲ್ಲಿ ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಕೆ.ಆರ್‌.ರಸ್ತೆಯ ತಮ್ಮ ಮನೆಯ ಮಹಡಿ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದ ಮುರಳಿ ಸಾವನ್ನಪ್ಪಿದರು. ತಮ್ಮ ಕೋಣೆಯಲ್ಲಿ ಜರ್ದಾ ಅಗಿಯುತ್ತ ಬರೆಯುತ್ತಿದ್ದ ಮುರಳಿ, ಎಂಜಲು ಉಗಿಯಲೆಂದು ಹೊರಬಂದವರು ಆಯತಪ್ಪಿ ಇಪ್ಪತ್ತೆೈದು ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ನಡುರಾತ್ರಿಯಲ್ಲಿ ಸಂಭವಿಸಿದ ಈ ದುರ್ಘಟನೆ ಮನೆಯವರ ಘಟನೆಗೆ ಬಂದದ್ದು ಭಾನುವಾರ ಬೆಳಕು ಹರಿದ ಮೇಲೆಯೇ.ಪತ್ನಿ ಹಾಗೂ ಓರ್ವ ಪುತ್ರನನ್ನು ಅವರು ಅಗಲಿದ್ದಾರೆ.

ಸುನಿಲ್‌ಕುಮಾಲ್‌ ದೇಸಾಯಿ ಅವರ ಹೊಸಚಿತ್ರ 'ಮರ್ಮ"ದ ಸಂತೋಷಕೂಟದಲ್ಲಿ ಶನಿವಾರ ರಾತ್ರಿ ಭಾಗವಹಿಸಿದ್ದ ಮುರಳಿ ಸುದ್ದಿಗಾರರೊಂದಿಗೆ ಮಾತನಾಡಿದ್ದರು.

ಚಾಮರಾಜಪೇಟೆ ರುದ್ರಭೂಮಿಯಲ್ಲಿ ನಡೆದ ಮುರಳಿ ಅವರ ಅಂತ್ಯ ಸಂಸ್ಕಾರದಲ್ಲಿ ದೇಸಾಯಿ ಸೇರಿದಂತೆ ಚಿತ್ರರಂಗದ ಅನೇಕ ಮಂದಿ ಭಾಗವಹಿಸಿದ್ದರು.(ಇನ್ಫೋ ವಾರ್ತೆ)

English summary
Beladingala Bale Producer Murali is no more
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada