»   » ಅಣ್ಣಾವ್ರಿಗೆ ಎನ್‌ಟಿಆರ್‌ ರಾಷ್ಟ್ರೀಯ ಪ್ರಶಸ್ತಿ

ಅಣ್ಣಾವ್ರಿಗೆ ಎನ್‌ಟಿಆರ್‌ ರಾಷ್ಟ್ರೀಯ ಪ್ರಶಸ್ತಿ

Posted By:
Subscribe to Filmibeat Kannada

ಹೈದರಾಬಾದ್‌ : ನಟ ಸಾರ್ವಭೌಮ, ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ ವಿಜೇತ ಡಾ. ರಾಜ್‌ಕುಮಾರ್‌ ಅವರನ್ನು 2002ನೇ ಇಸವಿಯ ಎನ್‌ಟಿಆರ್‌ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಆರಿಸಲಾಗಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ತೆಲುಗು ಚಿತ್ರರಂಗದ ತಾರೆಯಾಗಿದ್ದ ಎನ್‌.ಟಿ.ರಾಮರಾವ್‌ ಹೆಸರಿನಲ್ಲಿ ಕೊಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿ 5 ಲಕ್ಷ ರುಪಾಯಿ ನಗದು ಹಾಗೂ ಫಲಕ ಒಳಗೊಂಡಿದೆ.

ಭಾರತೀಯ ಚಿತ್ರರಂಗದ ದಿಗ್ಗಜರಾದ ಅಕ್ಕಿನೇನಿ ನಾಗೇಶ್ವರ ರಾವ್‌, ದಿಲೀಪ್‌ ಕುಮಾರ್‌, ಶಿವಾಜಿ ಗಣೇಶನ್‌, ಲತಾ ಮಂಗೇಷ್ಕರ್‌, ಭಾನುಮತಿ ರಾಮಕೃಷ್ಣ, ಹೃಶಿಕೇಶ್‌ ಮುಖರ್ಜಿ- ಇವರೆಲ್ಲ ಎನ್‌ಟಿಆರ್‌ ರಾಷ್ಟ್ರ ಪ್ರಶಸ್ತಿಗೆ ಈಗಾಗಲೇ ಆಯ್ಕೆಯಾಗಿದ್ದರು.

ಇನ್ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿರುವ ರಾಜ್‌ಕುಮಾರ್‌ ಅವರ ಸಿನಿಮಾ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆರಿಸಲಾಗಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada