ನಟ ದರ್ಶನ್ ವಿಚಾರಣೆ ಮಧ್ಯಾಹ್ನಕ್ಕೆ ಮುಂದೂಡಿಕೆ
ತನ್ನ ಪತ್ನಿ ಹಾಗೂ ಮಗುವಿಗೆ ಕೊಲೆ ಬೆದರಿಕೆ ಒಡ್ಡಿರುವ ಆರೋಪ ಎದುರಿಸುತ್ತಿರುವ ನಟ ದರ್ಶನ್ ಜಾಮೀನು ಅರ್ಜಿಯನ್ನು ಸೋಮವಾರ (ಸೆ.19) ಕೈಗೆತ್ತಿಕೊಂಡ ಬೆಂಗಳೂರು ಸೆಷನ್ಸ್ ನ್ಯಾಯಾಲಯ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದೆ.
ನಗರದ ಒಂದನೇ ಎಸಿಎಂಎಂ ನ್ಯಾಯಾಯಲದಲ್ಲಿ ಜಾಮೀನು ನಿರಾಕರಿಸಿದ ಹಿನ್ನೆಲಯಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ದರ್ಶನ್ ಮೇಲ್ಮನವಿ ಸಲ್ಲಿಸಿದ್ದರು. ಸೆ.14ರಂದು ಕೇಸನ್ನು ಕೈಗೆತ್ತಿಕೊಂಡಿದ್ದ ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂಡೂಡಿತ್ತು.
ದರ್ಶನ್‌ಗೆ ಜಾಮೀನು ಸಿಗುವುದು ಕಗ್ಗಂಟಾಗಿ ಪರಿಣಮಿಸಿದ್ದು ಅವರ ಅಭಿಮಾನಿಗಳು ಹಾಗೂ ಬಂಡವಾಳ ಹೂಡಿರುವ ನಿರ್ಮಾಪಕರ ನಡುವೆ ಆತಂಕದ ಕಾರ್ಮೋಡ ಕವಿದಿದೆ. ಈಗ ಎಲ್ಲರ ಕಣ್ಣು ಕೋರ್ಟ್ ತೀರ್ಪಿನ ಮೇಲೆ ನೆಟ್ಟಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
The session court on Monday (Sep 19) postponed the bail plea hearing of Kannada actor Darshan to 19th Sept noon. The actor is in judicial custody for allegedly assaulting and threatening his wife Vijayalakshmi with a revolver, filed a bail application before a Sessions Court.


Click it and Unblock the Notifications











