ಸಾರಥಿ ದರ್ಶನ್ ಗೆ ಶಿವಕುಮಾರಸ್ವಾಮಿಗಳ ಆಶೀರ್ವಾದ

Darshan
ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ಚಾಲೆಂಜಿಂಗ ಸ್ಟಾರ್ ದರ್ಶನ್ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಶಿವಕುಮಾರ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸ್ವಾಮೀಜಿಗಳು ದರ್ಶನ್ ಗೆ ಶಾಲಿ ಹೊದಿಸಿ ಆಶೀರ್ವದಿಸಿದರು. ನಟ ದರ್ಶನ್ ಸ್ವಾಮೀಜಿಗಳ ದರ್ಶನದಿಂದ ಪುಳಕಿತರಾದರು.

ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಶಿವಕುಮಾರ ಸ್ವಾಮಿಗಳ ಆಶೀರ್ವಾದ ದರ್ಶನ್ ಪಡೆದದ್ದು ಅವರ ಅಭಿಮಾನಿಗಳಿಗೆ ತುಂಬಾ ಸಂತೋಷವನ್ನು ನೀಡಿದೆ. ಸಾಕಷ್ಟು ಅಬಿಮಾನಿಗಳು ತುಮಕೂರಿನಲ್ಲಿ ದರ್ಶನ್ ಬಿಡುಗಡೆಗೆ ಹಂಬಲಿಸಿ ಉರುಳುಸೇವೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ತುಮಕೂರಿನಲ್ಲಿ ಸಾರಥಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ತುಮಕೂರಿನಲ್ಲಿ ಅಸಂಖ್ಯಾತ ಅಭಿಮಾನಿಗಳು ದರ್ಶನ್ ರನ್ನು ನೋಡಲು ಬಂದಿದ್ದರು.

ಪತ್ನಿಗೆ ಹಲ್ಲೆ ಮಾಡಿ ಜೈಲುಸೇರಿದ್ದ ನಟ ದರ್ಶನ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡ ಮೇಲೆ ಸಾಕಷ್ಟು ಬದಲಾಗಿದ್ದಾರೆ. ಜೈಲುವಾಸ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂಬುದು ಎಲ್ಲರ ಅಭಿಪ್ರಾಯ. ಬಿಡುಗಡೆಗೊಂಡ ತಕ್ಷಣ ದರ್ಶನ್ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಹೋಗಿದ್ದರು. ಈಗ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದ್ದಾರೆ.

ಇವೆಲ್ಲವೂ ಜನರ ಈ ಅಭಿಪ್ರಾಯಕ್ಕೆ ಇನ್ನಷ್ಟು ಪುಷ್ಠಿಕೊಡುವಂತಿದೆ ಎನ್ನಬಹುದು. ಒಟ್ಟಿನಲ್ಲಿ ದರ್ಶನ್ ಬದಲಾಗಿದ್ದಾರೆ ಅಥವಾ ಬದಲಾಗುತ್ತಿದ್ದಾರೆ. ಈಗ ದರ್ಶನ್ ಗೆ ಸಾರಥಿ ಸಿನಿಮಾದ ಯಶಸ್ಸೂ ಜೊತೆಯಾಗಿದೆ. ಮುಂದೆ ನಡೆಯಲಿರುವ ಸಾರಥಿಯ ರೋಡ್ ಶೋ ಸಾಕಷ್ಟು ಯಶಸ್ವಿಯಾಗುವ ನಿರೀಕ್ಷೆಯನ್ನಂತೂ ಮೂಡಿಸಿದೆ.

More from Filmibeat

English summary
Actor Darshan visited Sidhaganga Math today. Shivakumar Swamiji blessed Darshan. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X