»   » ಗಣೇಶ್, ವೇದಿಕಾ ಸಂಗಮಕ್ಕೆ ಡಿಟಿಎಸ್ ಸ್ಪರ್ಶ

ಗಣೇಶ್, ವೇದಿಕಾ ಸಂಗಮಕ್ಕೆ ಡಿಟಿಎಸ್ ಸ್ಪರ್ಶ

Subscribe to Filmibeat Kannada

ಅದ್ದೂರಿ ಪ್ರಚಾರಕ್ಕೆ ಹೆಸರಾದವರು ಎಸ್.ವಿ.ಬಾಬು. ಏನೇ ಮಾಡಿದರು ಅದ್ದೂರಿಯಾಗಿ ಮಾಡುವ ಬಾಬು ಅವರು ಸದ್ದಿಲದೆ ನಿರ್ಮಿಸಿರುವ ಚಿತ್ರ ಸಂಗಮ. ಸದ್ದಿಲದೆ ಆರಂಭವಾದರೂ ಶ್ರೀಮಂತಿಕೆಯ ಚಿತ್ರವಂತೂ ಹೌದು. ಚಿತ್ರೀಕರಣ ಹಾಗೂ ನಂತರದ ಪ್ರಕ್ರಿಯೆ ನಿಗದಿತ ಯೋಜನೆಯಂತೆ ಪೂರ್ಣವಾಗಿರುವ ಚಿತ್ರಕ್ಕೆ ಕರಿಸುಬ್ಬು ಸ್ಟೂಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಕೆ ಪ್ರಕ್ರಿಯೆ ಕೂಡ ಸಂಪೂರ್ಣವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಸಂಗಮದಲ್ಲಿ ಅನೇಕ ಸಂಗಮವಾಗಿದೆ. ಮೊದಲಿಗೆ ಕನ್ನಡ ಚಿತ್ರರಂಗದೊಂದಿಗೆ ರವಿವರ್ಮ ಎಂಬ ನೂತನ ನಿರ್ದೇಶಕನ ಸಂಗಮ, ಅದೇರೀತಿ ದಕ್ಷಿಣಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್ ಅವರ ಚೊಚ್ಚಲ ಕನ್ನಡ ಚಿತ್ರ ಈ ಸಂಗಮ ಹಾಗೂ ನಾಯಕ ಗಣೇಶ್ ಹಾಗೂ ಕನ್ನಡತಿ ವೇದಿಕಾ ಜೋಡಿಯ ಪ್ರಥಮ ಚಿತ್ರ ಸಂಗಮ. ಹೀಗೆ ಹಲವು ವಿಶೇಷಗಳ ಸಂಗಮ ಸದ್ಯದಲ್ಲೇ ತೆರೆಕಾಣಲಿದೆ. ಜಂಕಾರ್ ಸಂಸ್ಥೆ ಮೂಲಕ ಬಿಡುಗಡೆಯಾಗಿರುವ ಚಿತ್ರದ ಧ್ವನಿಸುರುಳಿಗಳು ಕೇಳುಗರ ಹೃದಯದಲ್ಲಿ ಮನೆ ಮಾಡಿದೆ.

ಎಸ್.ವಿ.ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶೇಖರ್‌ಚಂದ್ರರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಕಲೆ, ಗಂಡಸಿ ನಾಗರಾಜ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಗಣೇಶ್, ವೇದಿಕಾ, ರಂಗಾಯಣರಘು, ಕೋಮಲ್, ಸಾಧುಕೋಕಿಲ, ಧರ್ಮ, ತುಳಸಿಶಿವಮಣಿ, ಬಿ.ಜಯಮ್ಮ, ಬ್ರಹ್ಮಾವರ್, ಶಾಂತಮ್ಮ, ಕೋಟೆ ಪ್ರಭಾಕರ್, ಯಶಸ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada