ಫುಲ್ ವೀಕಾದ ನವರಸ ನಾಯಕ ಜಗ್ಗೇಶ್ ಬಾಡಿ

ಮಲೆಯಾಳಂ ಭಾಷೆಯಿಂದ ತಂದ ಯಾವ ಕಥೆಯೂ ಜಗ್ಗೇಶ ಕೈ ಹಿಡಿದ ಉದಾಹರಣೆ ಇಲ್ಲ. ಮೇಕಪ್, ಮನ್ಮಥ ಹಾಗೂ ಇದೀಗ ಬಾಡಿಗಾರ್ಡ್ 'ಮಠ' ಸೇರಿವೆ. ಮೇಕಪ್ ಹಾಗೂ ಮನ್ಮಥ ಚಿತ್ರಗಳ ಬಗ್ಗೆಯೂ ಇದೇ ಜಗ್ಗೇಶ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದರು. ಆದರೆ ಜಗ್ಗೇಶ್ ಎಣಿಕೆ ತಪ್ಪಿದೆ.
ಬಾಡಿಗಾರ್ಡ್ ಮೇಲೆ ಅತೀ ವಿಶ್ವಾಸವಿಟ್ಟು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು ಜಗ್ಗೇಶ್. ಆದರೀಗ ಬಾಡಿಗಾರ್ಡ್ ಮಟಾಶ್. ಅಲ್ಲಿಗೆ ಜಗ್ಗೇಶ್ ಮಾತು ಕಡಿಮೆ ಮಾಡಿ ಕಥೆ ಆಯ್ಕೆಯನ್ನು ಗಮನವಿಟ್ಟು ಮಾಡಬೇಕೆಂಬ ಮಾತು ಗಾಂಧಿನಗರದ ಗಲ್ಲಿಯಲ್ಲಿ ಗುಲ್ಲಾಗಿದೆ. ಒಟ್ಟಿನಲ್ಲಿ ಬಹುನಿರೀಕ್ಷೆಯ ಬಾಡಿಗಾರ್ಡ್ ಮಠ ಸೇರಿದೆ. (ಒನ್ ಇಂಡಿಯಾ ಕನ್ನಡ)
English summary
The Malayalam super hit Bodyguard came to kannada screen from Jageesh and his wife Parimala Jagggesh. But this movie became flopped.


Click it and Unblock the Notifications