»   » ಕಾಜಲ್ ಜತೆ ಎಕೆ 97 ಹಿಡಿದ ಶಿವರಾಜ್ ಕುಮಾರ್

ಕಾಜಲ್ ಜತೆ ಎಕೆ 97 ಹಿಡಿದ ಶಿವರಾಜ್ ಕುಮಾರ್

Posted By:
Subscribe to Filmibeat Kannada

ಬಾಲಿವುಡ್ ಬೆಡಗಿ ಕಾಜಲ್ ನಂತೆ ರೂಪ ಲಾವಣ್ಯಕ್ಕೇನೂ ಕಮ್ಮಿಯಿಲ್ಲದ ತೆಲುಗಿನ ಮತ್ತೊಬ್ಬ ಕಾಜಲ್ ಅಲಿಯಾಸ್ ಕಾಜಲ್ ಅಗರವಾಲ್ ಕನ್ನಡ ಚಿತ್ರರಂಗಕ್ಕೆ ಕಾಲಿರಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಎ ಕೆ 97 ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಐದಡಿ ಆರಿಂಚು ಎತ್ತರದ ಮುಂಬಯಿ ಮೂಲದ ಈ ಬೆಡಗಿ ಕಾಜಲ್ ಗೆ ಕನ್ನಡದ ನಿರ್ಮಾಪಕರು ಚೌಕಾಶಿ ಮಾಡಿ 50 ಲಕ್ಷ ನೀಡಿ ಕರೆತಂದಿದ್ದಾರೆ. ತೆಲುಗು ,ತಮಿಳು ಚಿತ್ರರಂಗದಲ್ಲಿ ಆಕೆಯ ಸಂಭಾವನೆ 75 ಲಕ್ಷಕ್ಕಿಂತ ಕಮ್ಮಿಯಿಲ್ಲ. ಸಮೂಹ ಮಾಧ್ಯಮ ವಿಭಾಗದಲ್ಲಿ ಪದವಿ ಪಡೆದರೂ, ಈ ಆಸೆ ಕಂಗಳ ಬೆಡಗಿಗೆ ಚಿತ್ರರಂಗದತ್ತ ಒಲವು ಬೆಳೆದು ಹಿಂದಿಯಲ್ಲಿ ನಾನಾ ಪಾಟೇಕರ್ ಅವರ ಚಿತ್ರವೊಂದರಲ್ಲಿ ಅಭಿನಯಿಸಿದ್ದು ಆಯಿತು. ಆದರೆ ದಕ್ಷಿಣಕ್ಕೆ ಕಾಲಿಟ್ಟ ಮೇಲೆ ಬೊಮ್ಮಲಾಟ್ಟಂ, ಕಾಳಿದಾಸ, ಲಕ್ಷ್ಮೀ ಕಲ್ಯಾಣಂ ಚಿತ್ರಗಳನ್ನು ಮಾಡಿದರು.

ತೆಲುಗಿನ ಕೃಷ್ಣವಂಶಿ ಅವರ 'ಚಂದಮಾಮ'(ಇದರಲ್ಲಿ ಕನ್ನಡದ ಸಿಂಧು ಮೆನನ್ ಸಹ ನಾಯಕಿ) ಹೆಸರು ತಂದು ಕೊಟ್ಟಿತು. ಸುಮಂತ್ ಅಭಿನಯದ 'ಪೌರುಡು', ನಿತಿನ್ ಜತೆ 'ಆಟಾಡಿಸ್ತಾ', ತಮಿಳಿನ ಭರತ್ ಜತೆ 'ಪಳನಿ' ವೆಂಕಟಪ್ರಭು ನಿರ್ದೇಶನದ 'ಸರೋಜಾ' ಸೇರಿದಂತೆ ಅಲ್ಲು ಅರ್ಜುನ್, ರಾಮ್ ಚರಣ್ ತೇಜಾ, ಜ್ಯೂ. ಎನ್ ಟಿಆರ್ ಅವರ ಜತೆ ಕಾಜಲ್ ಅಭಿನಯಿಸಿದ್ದಾರೆ.

ಕನ್ನಡದಲ್ಲಿ ಅಭಿನಯಿಸುವ ಮೂಲಕ ಚತುರ್ಭಾಷಾ ತಾರೆ ಎನಿಸಿಕೊಳ್ಳುವ ಕಾಜಲ್ ಗೆ ಸುಷ್ಮಿತಾ ಸೇನ್ ಅವರು ರೋಲ್ ಮಾಡೆಲ್ ಅಂತೆ. ಬಹುಶಃ ಕಾಜಲ್ ಕೂಡ ಸುಷ್ಮಿತಾ, ಐಶ್ವರ್ಯ ರೈ ಅವರಂತೆ ರೂಪದರ್ಶಿಯಾದ್ದರಿಂದ ಪ್ರಭಾವಿತರಾಗಿರಬಹುದು. ಒಟ್ಟಿನಲ್ಲಿ ಕನ್ನಡಕ್ಕೆ ಸುಂದರ ಲಲನೆಯರ ಆಮದು ನಿರಂತರವಾಗಿ ಆಗುತ್ತಿದೆ .ಅದೂ ಹಿರಿಯ ನಟ ಶಿವರಾಜ್ ಹಾಗೂ ಅವರ ತಮ್ಮ ಪುನೀತ್ ಚಿತ್ರದಲ್ಲೇ ಹೆಚ್ಚು ಅನ್ನುವುದು ವಿಪರ್ಯಾಸವಾದರೂ ಸತ್ಯ.

(ದಟ್ಸ್ ಸಿನಿವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X