ಸಂಜೆ ವೇಳೆಗೆ ನಟಿ ರಮ್ಯಾ ರಾಜಕೀಯ ಭವಿಷ್ಯ
ನಟಿ ರಮ್ಯಾ ಅವರು ರಾಜ್ಯ ಯುವ ಕಾಂಗ್ರೆಸ್ ಚುನಾವಣಾ ಕಣಕ್ಕಿಳಿದಿರುವುದು ಗೊತ್ತೇ ಇದೆ. ಬೆಂಗಳೂರು ಶಾಂತಿನಗರದಲ್ಲಿ ಸೋಮವಾರ (ಸೆ.19) ನಡೆದ ಚುನಾವಣೆಯಲ್ಲಿ ರಮ್ಯಾ ಮತದಾನ ಮಾಡಿದರು. ಅವರು ಎಲ್ಲರಂತೆ ಕ್ಯೂನಲ್ಲಿ ನಿಂತು ತಮ್ಮ ಸರದಿಗಾಗಿ ಕಾದು ಓಟು ಹಾಕಿದ್ದು ವಿಶೇಷ.
ಸೋಮವಾರ (ಸೆ.19) ಸಂಜೆ ವೇಳೆಗೆ ಬೂತ್ ಮಟ್ಟದ ಚುನಾವಣೆ ಫಲಿತಾಂಶವೂ ಹೊರಬೀಳಲಿದ್ದು ರಮ್ಯಾ ಭವಿಷ್ಯ ನಿರ್ಧಾರವಾಗಲಿದೆ.. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮೈಕ್ ಹಿಡಿದ ಪತ್ರಕರ್ತರಿಗೆ, ಗೆದ್ದೇ ಗೆಲ್ಲುತ್ತೇನೆ ಎಂಬ ಕಾನ್ಫಿಡೆನ್ಸ್ ಇದೆ. ಹಾಗೆಯೇ ಸ್ವಲ್ಪ ಹೆದರಿಕೆಯೂ ಆಗುತ್ತಿದೆ ಎಂದರು.
ಇದು ತಮ್ಮ ಚೊಚ್ಚಲ ಚುನಾವಣೆಯಾದ ಕಾರಣ ಅವರ ಮುಖದಲ್ಲಿ ಕೊಂಚ ಆತಂಕ ಕಾಣುತ್ತಿತ್ತು. ತಾವು ಗೆದ್ದ ಬಳಿಕ ಶಾಂತಿನಗರ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದಗಿಯೂ ಹೇಳಿದ್ದಾರೆ. ಆದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಜೈ ಎಂದದ್ದು ಕಾಂಗ್ರೆಸ್ ಪಕ್ಷವನ್ನು ಕೊಂಚ ಗಲಿಬಿಲಿಗೊಳಿಸಿತ್ತು.
ಮೋದಿ ಅವರನ್ನು ರಮ್ಯಾ ಹೊಗಳಿದ್ದು ಕೈಪಾಳಯದಲ್ಲಿ ಕೊಂಚ ಅಸಮಾಧಾನಕ್ಕೆ ಕಾರಣವಾಗಿತ್ತು. ತಾವು ಮೋದಿ ಅನುಯಾಯಿ ಅಲ್ಲ. ಕಾಂಗ್ರೆಸ್‌ನ ನಿಷ್ಟಾವಂತ ಕಾರ್ಯಕರ್ತೆ ಎಂದಿರುವ ರಮ್ಯಾ ಸದ್ಯಕ್ಕೆ ಬೂತ್ ಮಟ್ಟದ ಚುನಾವಣೆಯಲ್ಲಿ ಗೆಲ್ಲೋಣ. ಆ ಬಳಿಕ ವಷ್ಟೇ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಎಂದಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











