For Quick Alerts
  ALLOW NOTIFICATIONS  
  For Daily Alerts

  ಹೊಸ ಉಲ್ಲಾಸ ದಲ್ಲಿ ರಮ್ಯಾ,ವಿಜಯ ಕುಮಾರ್

  By Staff
  |
  ಸಿನೆಮಾ ರಂಗ ಅಯಸ್ಕಾಂತವಿದ್ದ ಹಾಗೆ ಅದಕ್ಕೆ ಆಕರ್ಷಿತರಾಗದವರು ವಿರಳ. ಎಂತಹವರನ್ನು ತನ್ನೆಡೆ ಸೆಳೆಯುವ ಅತ್ಯಾಕರ್ಷಕ ಸಾಮರ್ಥ್ಯ ಹೊಂದಿದೆ ಈ ರಂಗ. ರಾಜಕಾರಣಿಗಳು, ಸಾಹಿತಿಗಳು ಹಾಗೂ ಆಟಗಾರರಾದಿಯಾಗಿ ಹಲವು ಮಾಧ್ಯಮ ಹಾಗೂ ಉದ್ಯಮದವರು ಒಂದಲ್ಲಾಒಂದು ರೀತಿ ಚಿತ್ರರಂಗದೊಂದಿಗೆ ಸಂಬಂಧ ಹೊಂದಿರುವವರು.

  ಈ ಮಾಯಾಲೋಕಕ್ಕೆ ಪಾದಾರ್ಪಣೆ ಮಾಡುವ ಸರದಿ ಈಗ ಬೈಕ್ ಸವಾರನದು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೈಕ್ ಸವಾರಿಯಲ್ಲಿ ಗುರುತಿಸಿಕೊಂಡಿರುವ ವಿಜಯಕುಮಾರ್ 'ಉಲ್ಲಾಸ' ಚಿತ್ರದಲ್ಲಿ ನಾಯಕನಾಗುವ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಈ ಸಾಹಸಿಗನ ಸಾಹಸಕ್ಕೆ ಸಾಕ್ಷಿಯಾಯಿತು ಚಿತ್ರದ ಒಂದು ಸನ್ನಿವೇಶ. ಎಚ್.ಎಂ.ಟಿ ಲೇಔಟ್ ಆವರಣದಲ್ಲಿ ಜಾತ್ರೆಯ ಸಂಭ್ರಮದಲ್ಲಿ ಮಗ್ನರಾಗಿದ್ದ ಜನತೆ ರೋಚಕ ಸಾಹಸ ಕಂಡು ಬೆರಗಾಗುತ್ತಾರೆ. ಈ ಸನ್ನಿವೇಶದಲ್ಲಿ ವಿಜಯ್‌ಕುಮಾರ್ ಅವರೊಂದಿಗೆ ಅಂಜಲಾ ಜವೇರಿ ಕೂಡ ಭಾಗವಹಿಸಿದ್ದರು.

  'ಉಲ್ಲಾಸ'ಕ್ಕಾಗಿ ದುಬಾರಿ ಬೆಲೆಯ ವಿದೇಶಿ ಬೈಕ್‌ಗಳನ್ನು ಬಳಸಿಕೊಳ್ಳಲಾಗಿದೆ. ಚಲಿಸುವ ರೈಲಿನ ಮೇಲೆ ಬೈಕ್ ಹಾರುವುದು ಹಾಗೂ ಕಟ್ಟಡಗಳಿಂದ ಜಿಗಿಯುವ ಸನ್ನಿವೇಶಗಳು ನೋಡುಗರ ಹೃದಯ ಬಡಿತವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ.

  ನಾಗರಾಜ್ ಸಿನಿ ಕಂಬೈನ್ಸ್ ಲಾಂಛನದಲ್ಲಿ ಪಿ.ನಾಗರಾಜ್ ಹಾಗೂ ಕೆ.ರಮೇಶ್ ನಿರ್ಮಿಸುತ್ತಿರುವ 'ಉಲ್ಲಾಸ' ಚಿತ್ರವನ್ನು ಪ್ರಕಾಶ್ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಎಮಿಲ್ ಸಂಗೀತವಿರುವ ಈ ಚಿತ್ರಕ್ಕೆ ಜಶ್ವಂತ್ ಅವರ ಛಾಯಾಗ್ರಹಣವಿದೆ. ಇಮ್ರಾನ್, ಬೃಂದಾ ನೃತ್ಯ, ವಿಜಯ್ ಸಾಹಸ, ಮೋಹನ್ ಕಲೆ, ಪಿ.ಆನಂದ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಜಯ್‌ಕುಮಾರ್, ರಮ್ಯಾ, ಶರತ್‌ಲೋಹಿತಾಶ್ವ, ಸುಮನ್, ಶರಣ್, ಅಂಜಲಾಜವೇರಿ, ಅವಿನಾಶ್, ಬುಲೆಟ್‌ಪ್ರಕಾಶ್ ಮುಂತಾದವರಿದ್ದಾರೆ.
  (ದಟ್ಸ್ ಕನ್ನಡಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X