ಗೋಲ್ಡನ್ ಗರ್ಲ್ ರಮ್ಯಾಗೆ ಭರ್ಜರಿ ಗೆಲುವು

By Rajendra

ರಾಜ್ಯ ಯುವ ಕಾಂಗ್ರೆಸ್‌ಗೆ ಸ್ಪರ್ಧಿಸಿರುವ ನಟಿ ರಮ್ಯಾ ಭರ್ಜರಿ ಅಂತರದಿಂದ ಗೆದ್ದಿದ್ದಾರೆ. ಸೋಮವಾರ (ಸೆ.19) ಬೂತ್ ಮಟ್ಟದ ಚುನಾವಣೆ ಫಲಿತಾಂಶಗಳು ಹೊರಬಿದ್ದಿವೆ. ರಮ್ಯಾ ತಮ್ಮ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಎಂಟು ಮತಗಳ ಅಂತರದಿಂದ ರಮ್ಯಾ ತಮ್ಮ ಸಮೀಪದ ಸ್ಪರ್ಧಿ ಶ್ರೀಕಾಂತ್ ವಿರುದ್ಧ ಗೆದ್ದಿದ್ದಾರೆ. ಶ್ರೀಕಾಂತ್‌ಗೆ ಕೇವಲ ಎರಡು ಮತ ಬಿದ್ದಿವೆ.

ಶಾಂತಿನಗರದ ಬೂತ್ ನಂಬರ್ 3ರಿಂದ ರಮ್ಯಾ ಸ್ಪರ್ಧಿಸಿದ್ದರು. ರಮ್ಯಾ ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಗೆಲುವು ದಾಖಲಿಸಿದ್ದಾರೆ. ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ನಮ್ಮ ಮೇಲೆ ನಂಬಿಕೆ ಇಟ್ಟು ಮತ ಹಾಕಿದ ಎಲ್ಲರಿಗೂ ಥ್ಯಾಂಕ್ಸ್. ತುಂಬಾ ಸಂತೋಷವಾಗುತ್ತಿದೆ ಎಂದಿದ್ದಾರೆ.

ನಾವೆಲ್ಲಾ ಬದಲಾವಣೆ ಬಗ್ಗೆ ಮಾತನಾಡುತ್ತಿರುತ್ತೇವೆ. ಈಗ ಕಾಲ ಕೂಡಿ ಬಂದಿದೆ. ಬನ್ನಿ ಎಲ್ಲರೂ ಕೈಜೋಡಿಸಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡೋಣ ಎಂದಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದೂ ರಮ್ಯಾ ಈ ಸಂದರ್ಭದಲ್ಲಿ ತಿಳಿಸಿದರು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada actress Ramya, fielded by the Indian Youth Congress election from Shantinagar, won on Monday by an unexpected margin of 8 votes against her rival Srikanth. She expressed her joy for winning first time in election.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X