For Quick Alerts
  ALLOW NOTIFICATIONS  
  For Daily Alerts

  ವಜ್ರದ ಆಭರಣ ಕಳೆದುಕೊಂಡ ಸಿನಿಮಾ ತಾರೆ

  By Rajendra
  |

  ಕನ್ನಡದ 'ಗಡಿಬಿಡಿ ಗಂಡ' ಖ್ಯಾತಿಯ ದಕ್ಷಿಣ ಒಂದು ಕಾಲದ ಸುಂದರಿ ಹಾಗೂ ಸದ್ಯಕ್ಕೆ ವೈಎಸ್ ಆರ್ ಕಾಂಗ್ರೆಸ್‌ ಪಕ್ಷದಲ್ಲಿರುವ ಸಿನಿಮಾ ತಾರೆ ರೋಜಾ ಲಕ್ಷಾಂತರ ಬೆಲೆ ಬಾಳುವ ವಜ್ರದ ಆಭರಣ ಕಳೆದುಕೊಂಡಿದ್ದಾರೆ. ವಿಜಯವಾಡದಿಂದ ಸಿಕಿಂದರಾಬಾದ್‌ಗೆ ಪ್ರಯಾಣಿಸಬೇಕಾದರೆ ಈಕೆಯ ವಜ್ರಾಭರಣ ಕಳುವಾಗಿದೆ.

  ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈಕೆ, ವಜ್ರಖಚಿತ ಉಂಗುರ ಹಾಗೂ ನೆಕ್ಲೇಸನ್ನು ತಮ್ಮ ಕೈಚೀಲದಲ್ಲಿಟ್ಟುಕೊಂಡು ಸಣ್ಣಗೆ ಒಂದು ನಿದ್ದೆ ಹೊಡೆದಿದ್ದಾರೆ. ಎಚ್ಚರಗೊಂಡಾಗಲೂ ಆ ಬಗ್ಗೆ ಗಮನವಿರಲಿಲ್ಲವಂತೆ. ಬಳಿಕ ಸಿಕಂದರಾಬಾದಿನ ಮನೆಗೆ ಹೋಗಿ ನೋಡಿದಾಗಲೆ ಆಕೆಗೆ ಗೊತ್ತಾಗಿದ್ದಂತೆ.

  ಕೂಡಲೆ ಎಚ್ಚೆತ್ತುಕೊಂಡ ಆಕೆ ಸೀದಾ ಸಿಕಿಂದಾಬಾದ್ ಪೊಲೀಸ್ ಠಾಣೆಗೆ ಹೋಗಿ ತಮ್ಮ ವಜ್ರಾಭರಣ ಕಳುವಾದ ಬಗ್ಗೆ ದೂರು ನೀಡಿದ್ದಾರೆ. ಕಂಪ್ಲೇಟ್ ಬರೆದುಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕನ್ನಡದ ಮೌರ್ಯ, ನಲಿ ನಲಿಯುತಾ, ಪರ್ವ ಮುಂತಾದ ಚಿತ್ರದಲ್ಲಿ ರೋಜಾ ಅಭಿನಯಿಸಿದ್ದಾರೆ. (ಏಜೆನ್ಸೀಸ್)

  English summary
  South Indian actress and politician Roja lost her diamond studded ear rings and necklace while traveling from Vijayawada to Secunderabad. After realised her diamonds are not in her handbag, Roja rushed to the Secunderabad police station to file a complaint.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X