»   » ಸೋನಾಲ್ ಚೌಹಾಣ್ ಎಂಬ ಬಿಂಕದ ಸಿಂಗಾರಿ!

ಸೋನಾಲ್ ಚೌಹಾಣ್ ಎಂಬ ಬಿಂಕದ ಸಿಂಗಾರಿ!

Subscribe to Filmibeat Kannada
Sonal Chouhan
'ಚೆಲುವೆಯೆ ನಿನ್ನ ನೋಡಲು' ಚಿತ್ರದ ಮೂಲಕ ಸೋನಾಲ್ ಚೌಹಾಣ್ ಎಂಬ ಬಾಲಿವುಡ್ ನಾಯಕಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈಕೆ ನಟಿಸಿರುವ 'ಜನ್ನತ್' ಬಾಕ್ಸಾಫೀಸ್ ನಲ್ಲಿ ಗೆದ್ದು ಬಾಲಿವುಡ್ ನಲ್ಲಿ ಅವಕಾಶಗಳ ಬಾಗಿಲನ್ನೇ ತೆರೆದಿದೆ. ಹೀಗಿದ್ದು ಈಕೆ ದಕ್ಷಿಣದ ಕಡೆ ಮುಖ ಮಾಡುವ ಅವಶ್ಯಕತೆಯಾದರೂ ಏನಿತ್ತು?

ಜನ್ನತ್ ಚಿತ್ರಕ್ಕೂ ಮುನ್ನ ಆಕೆ 'ಚೆಲುವೆಯೆ...' ಚಿತ್ರಕ್ಕೆ ಸಹಿ ಹಾಕಿದ್ದರಂತೆ. ಹಾಗಾಗಿ ಅನಿವಾರ್ಯವಾಗಿ ನಟಿಸಬೇಕಾಗಿತ್ತು ಎಂಬು ಮಾತನ್ನು ಸೋನಾಲ್ ತಳ್ಳಿಹಾಕುತ್ತಾರೆ. ಚಿತ್ರಕಥೆ ಚೆನ್ನಾಗಿತ್ತು. ಇಂತಹ ಚಿತ್ರಗಳನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ. ಹಾಗಾಗಿ ಈ ಚಿತ್ರಕ್ಕೆ ಒಪ್ಪಿಗೆ ಕೊಟ್ಟೆ. ಎಂಬುದು ಅವರ ವಾದ.

ಜನ್ನತ್ ನಲ್ಲಿ ಇಮ್ರಾನ್ ಹಸ್ಮಿಯೊಂದಿಗೆ ನಟಿಸಿದ ಈಕೆ ಶಿವರಾಜ್ ಜೊತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆಯಂತೆ. ಭಾಷೆ ಸಮಸ್ಯೆಯಾಗಿರುವುದರಿಂದ ಶಿವರಾಜ್ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಇಂತಹ ಉತ್ತಮ ನಟರೊಂದಿಗೆ ನಟಿಸಲು ನಾನು ಸದಾ ಸಿದ್ಧ ಎಂದು ಹೇಳಿದ್ದಾರೆ.

'ಚೆಲುವೆಯೆ...' ಚಿತ್ರದ ವಿಶೇಷವೆಂದರೆ, ಒಂದು ಹಾಡನ್ನ್ನು ವಿಶ್ವದ ಏಳು ಅದ್ಭುತ ಸ್ಥಳಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಏಳು ಅದ್ಭುತಗಳೊಂದಿಗೆ ತನ್ನ ಸೌಂದರ್ಯವನ್ನು ಹೋಲಿಸಿರುವ ಬಗ್ಗೆ ಸೋನಾಲ್ ನಾಚಿ ನೀರಾಗಿದ್ದಾರೆ. ಪ್ರಸ್ತುತ ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಎಂಬ ಹೆಗ್ಗಳಿಕೆಗೆ ಸೋನಾಲ್ ಪಾತ್ರವಾಗಿದ್ದಾರೆ. ಇದಕ್ಕೆಲ್ಲಾ ಜನ್ನತ್ ಚಿತ್ರವೇ ಕಾರಣವಂತೆ. ಅಂದಹಾಗೆ ಸಂಭಾವನೆ ಎಷ್ಟು ಎಂದು ತಿಳಿಸಿಲ್ಲ!

ಜನ್ನತ್ ಚಿತ್ರವನ್ನು ಮೆಚ್ಚಿಕೊಂಡಿರುವ ಮಹೇಶ್ ಭಟ್ ತನ್ನ ಮುಂದಿನ ಚಿತ್ರಕ್ಕೆ ಸೋನಾಲ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಥೆ, ಚಿತ್ರಕಥೆಗಳು ಸರಿ ಇಲ್ಲದ ಕಾರಣಕ್ಕೆ 'ರಾಜ್' ಸೇರಿದಂತೆ ಹಲವಾರು ಬಾಲಿವುಡ್ ಚಿತ್ರಗಳನ್ನು ಸರಾಸಗಟಾಗಿ ತಳ್ಳಿಹಾಕಿ ಎದೆಗಾರಿಕೆ ಪ್ರದರ್ಶಿಸಿದ್ದಾರೆ ಸೋನಾಲ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸೋನಲ್ ಚೌಹಾಣ್ ಚಿತ್ರಪಟ
ಚೆಲುವೆಯೆ ನಿನ್ನ ನೋಡಲು ಚಿತ್ರದಲ್ಲಿ ಸೋನಾಲ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada