ಪೂಜಾರಿ ಆದಿಲೋಕೇಶ್ 'ನಿಷೇಧಾಜ್ಞೆ'ಯಲ್ಲಿ

By Staff

ಆದಿಲೋಕೇಶ್ ಮುಖ್ಯ ಭೂಮಿಕೆಯಲ್ಲಿರುವ 'ನಿಷೇಧಾಜ್ಞೆ' ಚಿತ್ರಫೆ. 24ರಿಂದ ಸೆಟ್ಟೇರಲಿದೆ. ಭರತ್‌ಬಾಬು ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಪಕರಾದ ಎಸ್.ವಿ.ನಾರಾಯಣಸ್ವಾಮಿ ಹೊಸಕೋಟೆ ಹಾಗೂ ಸೂರ್ಯಕಾಂತ್ ಜಾದವ್ ನಿರ್ಮಿಸುತ್ತಿದ್ದಾರೆ. ಬಸವರಾಜಪ್ಪ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

'ಜೋಗಿ' ಚಿತ್ರದ 'ಬಿಡ್ಡ'ನ ಪಾತ್ರದಲ್ಲಿ ನಟಿಸಿದ್ದ ಆದಿ ಲೋಕೇಶ್‌ರ ನಟನೆ ಎಲ್ಲರ ಗಮನ ಸೆಳೆದಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿನ ಪಿವಿಆರ್‌ನಲ್ಲಿ 'ಜೋಗಿ' ಚಿತ್ರ ನೋಡಿ ಆದಿ ಲೋಕೇಶ್ ನಟನೆಯನ್ನು ಮೆಚ್ಚಿದ್ದರು. ನಂತರ ಬಂದ 'ಪೂಜಾರಿ' ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದರು ಆದಿಲೋಕೇಶ್. ಆದರೆ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ.

ನಿಷೇದಾಜ್ಞೆ ಸೂತ್ರಧಾರ:
ನಿರ್ದೇಶಕ ಶಿವಮಣಿ ಅವರ ಬಳಿ ಸಹಾಯಕರಾಗಿದ್ದ ಪದ್ಮನಾಭ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಪರಿಸ್ಥಿತಿಯ ಒತ್ತಡದಿಂದ 'ನಿಷೇಧಾಜ್ಞೆ' ಜಾರಿಯಾಗುತ್ತದೆ. ಅಂತಹ ಸ್ಥಿತಿಯಲ್ಲಿ ಜರಗುವ ಬಹುಮುಖ್ಯ ಘಟನೆ ಚಿತ್ರದಆಧಾರಸ್ತಂಭ. ನಾಗರೀಕರು ಹಾಗೂ ಪೊಲೀಸರ ಮನಸ್ಸಿನ ತುಮುಲಗಳ ಚಿತ್ರಣವನ್ನು ನೀಡುವುದು ನಮ್ಮ ಉದ್ದೇಶ ಎಂದು ನಿರ್ದೇಶಕರು ಹೇಳಿದರು. ಈ ಚಿತ್ರದಲ್ಲಿ ನಿವೃತ್ತ ಪೋಲೀಸ್ ಅಧಿಕಾರಿ ಅಬ್ದುಲ್‌ಅಜೀಮ್ ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಜೀಮ್ ಅವರ ವೃತ್ತಿಜೀವನದಲ್ಲಿ ನಡೆದ ಕೆಲವು ಸ್ವಾರಸ್ಯಕರಘಟನೆಗಳು ಚಿತ್ರದಲ್ಲಿ ಅಡಕವಾಗಲಿದೆ ಎಂದು ನಿರ್ದೇಶಕ ಪದ್ಮನಾಭ ಅವರು ತಿಳಿಸಿದರು.

ಹೃದಯಂಗಮ ಸನ್ನಿವೇಶಗಳೊಂದಿಗೆ ಸಾಹಸ, ಕುತೂಹಲ ಭರಿತ ದೃಶ್ಯಗಳನ್ನೊಳಗೊಂಡಿರುವ ಈ ಚಿತ್ರದ ಛಾಯಾಗ್ರಹಣ ರಮೇಶ್ ಅವರದ್ದು. ಗಿರಿಧರ್ ಸಂಗೀತ, ಕೃಷ್ಣಾಚಾರ್ ಕಲೆ, ಅರವಿಂದ್ ನೃತ್ಯ, ಗುಣಶೇಖರ್ ಸಂಕಲನ, ಲಕ್ಷ್ಮಣ್‌ಕುಮಾರ್, ಮೂರ್ತಿ ಸಹನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಆದಿಲೋಕೇಶ್, ಅಬ್ದುಲ್‌ಅಜೀಮ್, ಭರತ್‌ಬಾಬು, ಪದ್ಮಜಾರಾವ್, ಪ್ರಿಯಾಂಕ, ಶಂಕರ್ ಅಶ್ವತ್, ಸುರೇಶ್‌ ಮಂಗಳೂರು, ಅಶ್ವಥ್‌ ನೀನಾಸಂ, ಸ್ನೇಹಜಗದೀಶ್, ಧಮ್‌ಕುಮಾರ್ ಮುಂತಾದವರಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X