»   » ಚಿತ್ರನಟಿ ಅಮೂಲ್ಯಾರಿಗೆ ಪೊಲೀಸ್ ಭದ್ರತೆ?

ಚಿತ್ರನಟಿ ಅಮೂಲ್ಯಾರಿಗೆ ಪೊಲೀಸ್ ಭದ್ರತೆ?

Subscribe to Filmibeat Kannada

ಚಿತ್ರನಟಿ ಅಮೂಲ್ಯಾ ಅವರಿಗೆ ಪದೇ ಪದೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಆಕೆಗೆ ಪೊಲೀಸ್ ಭದ್ರತೆ ಒದಗಿಸಲು ಚಿಂತಿಸಲಾಗಿದೆ. ಆಟೋಗ್ರಾಫ್ ಪಡೆಯುವ ನೆಪದಲ್ಲಿ ಆಯುಧದಿಂದ ಚುಚ್ಚಿ ಕೊಲೆ ಮಾಡುತ್ತೇನೆ ಎಂದು ಅಪರಿಚಿತ ವ್ಯಕ್ತಿ ನಟಿ ಅಮೂಲ್ಯರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದ. ಈ ಸಂಬಂಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ದೂರು ದಾಖಲಿಸಿದ್ದರು.

ಇಷ್ಟೆಲ್ಲಾ ಆದ ನಂತರವೂ ಆ ಅಪರಿಚ ಸುಮ್ಮನಾಗಿಲ್ಲ. ಇದೀಗ ಆಕೆಯ ಮನೆಯ ಗೋಡೆ ಮೇಲೆ ಶುಕ್ರವಾರ(ಡಿ.18)'I Love You' ಎಂದು ಬರೆದು ಹೋಗಿದ್ದಾನೆ.ಈ ಘಟನೆಯಿಂದ ನಟಿ ಅಮೂಲ್ಯ ಗಾಬರಿಗೊಂಡಿದ್ದಾರೆ. ಏತನ್ಮಧ್ಯೆ ವೈಯಾಲಿ ಕಾವಲ್ ಪೊಲೀಸರು ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಲು ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಮಲ್ಲೇಶ್ವರಂನ ಕೃಷ್ಣಪ್ಪ ಬ್ಲಾಕ್ ನಲ್ಲಿರುವ ಅಮೂಲ್ಯರ ಮನೆಯ ಟೆರೇಶ್ ಮೇಲೆ ಕಳೆದ ನವೆಂಬರ್ 9ರಂದು ಆಕೆಯ ಫೋಟೋ ಇಟ್ಟು ಸಿಗರೇಟು ತುಂಡುಗಳನ್ನು ಬಿಸಾಡಿದ ಘಟನೆ ನಡೆದಿತ್ತು. ಇತ್ತೀಚೆಗೆ ಅಮೂಲ್ಯರ ಅಣ್ಣ ದೀಪಕ್ ರ ಮೊಬೈಲ್ ಗೆ ಕರೆ ಮಾಡಿದ ವ್ಯಕ್ತಿ ಮಹಡಿ ಮೇಲೆ ನಡೆದಿದ್ದ ಘಟನೆಯನ್ನು ಪ್ರಸ್ತಾಪಿಸಿ ಇದು ತನ್ನ ಸ್ನೇಹಿತನ ಕೆಲಸವಾಗಿದೆ. ಬ್ರಹ್ಮ ಎಂಬ ಈತ ಸೈಕೋಪಾತ್ ಆಗಿದ್ದಾನೆ ಎಂದು ಹೇಳಿ ಹೆದರಿಸಿದ್ದ.

ಸದ್ಯಕ್ಕೆ ಪ್ರಕಾಶ್ ರೈ ಅವರ 'ನಾನು ನನ್ನ ಕನಸು' ಚಿತ್ರದಲ್ಲಿ ಅಮೂಲ್ಯ ತೊಡಗಿಕೊಂಡಿದ್ದಾರೆ. ಅಮೂಲ್ಯರನ್ನು ಕಾಲೇಜಿನ ಬಳಿಯೆ ಕೊಲ್ಲುವುದಾಗಿ ನಂತರ ನಾಲ್ಕು ಕರೆಗಳು ದೀಪಕ್ ಗೆ ಬಂದಿವೆ. ವಿವಿಧ ಕಾಯಿನ್ ಬಾಕ್ಸ್ ಗಳಿಂದ ಕರೆ ಮಾಡಿ ತಮ್ಮನ್ನು ಹಾಗೂ ಸಹೋದರಿ ಅಮೂಲ್ಯರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೀಪಕ್ ದೂರಿನಲ್ಲಿ ತಿಳಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada