ಚೆನ್ನೈನಲ್ಲಿ ಸಿನಿಮಾ ನೋಡಿದ ಅಣ್ಣಾ ಹಜಾರೆ

ಚೆನ್ನೈನ ಫೋರ್ ಸ್ಕ್ರೀನ್ಸ್ ಪ್ರಿವ್ಯೂ ಥಿಯೇಟರ್‌ನಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲುವ 'ಮುಧಲ್ವಾರ್ ಗಾಂಧಿ' ಎಂಬ ಚಿತ್ರವನ್ನು ವೀಕ್ಷಿಸಿದರು. ಬಾಲಕೃಷ್ಣನ್ ನಿರ್ದೇಶನದ ಈ ಚಿತ್ರವನ್ನು ಹಿಂದಿ ಭಾಷೆಗೆ ಡಬ್ ಮಾಡಲಾಗಿತ್ತು.
ಹಿಂದಿಯಲ್ಲಿ ಈ ಚಿತ್ರಕ್ಕೆ Welcome Back Gandhi ಎಂದು ಹೆಸರಿಡಲಾಗಿದೆ. ಅಣ್ಣಾ ಹಜಾರೆ ಅವರೊಂದಿಗೆ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಸೇರಿದಂತೆ ಹಲವು ಗಣ್ಯರು ವೀಕ್ಷಿಸಿದರು. ಚಿತ್ರದ ನಾಯಕ ನಟ ಅರ್ಜುನ್ ಕೂಡ ಉಪಸ್ಥಿತರಿದ್ದರು. ಸಂಪೂರ್ಣ ಚಿತ್ರವನ್ನು ವೀಕ್ಷಿಸಿದ ಅಣ್ಣಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಜನವರಿಯಲ್ಲಿ ತೆರೆಕಾಣಲಿದೆ. (ಏಜೆನ್ಸೀಸ್)
More from Filmibeat
English summary
Anti-corruption activist Anna Hazare recently visit to Chennai. spent about an hour watching the film Welcome Back Gandhi, which is dubbed version of Mudhalvar Gandhi, the story is based on the political happenings as well as the state of the student community today.


Click it and Unblock the Notifications











