ಬಿ ಜಯಶ್ರೀಗೆ ಶ್ರೇಷ್ಠ ನಟಿ ಅಂತಾರಾಷ್ಟ್ರೀಯ ಪ್ರಶಸ್ತಿ

B Jayashri
ಖ್ಯಾತ ರಂಗ ಕಲಾವಿದೆ, ಗಾಯಕಿ ಹಾಗೂ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಗೆ ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ. ಅವಿ ಲೂಥ್ರಾ ನಿರ್ದೇಶನದ 'ಲಕ್ಕಿ' ಚಿತ್ರದಲ್ಲಿನ ಮನಮುಟ್ಟುವ ಅಭಿನಯಕ್ಕಾಗಿ ಜಯಶ್ರೀ ಈ ಪ್ರಾಶಸ್ತಿಗೆ ಭಾಜನರಾಗಿದ್ದಾರೆ. ನಾಟಕ, ರಂಗಕರ್ಮಿ, ದಿವಂಗತ ಗುಬ್ಬಿವೀರಣ್ಣ ಅವರ ಮೊಮ್ಮಗಳು ಈ ಬಿ. ಜಯಶ್ರೀ ಎಂಬುದು ವಿಶೇಷ. ಅವರಿಗೆ 'ಕಂಗ್ರಾಟ್ಸ್...'

ದಕ್ಷಿಣ ಆಫ್ರಿಕಾದ ಬುಡಕಟ್ಟು ಜನಾಂಗವೊಂದು ಮಾತನಾಡುವ 'ಜುಲು' ಭಾಷೆಯ ಚಿತ್ರ ಈ 'ಲಕ್ಕಿ.' ಜೊತೆಗೆ ಹಿಂದಿ, ಇಂಗ್ಲಿಷ್ ಭಾಷೆಗಳೂ ಇವೆ. ನಿರ್ದೇಶಕ ಅವಿ ಲೂಥ್ರಾ 2005 ರಲ್ಲಿ ಇದೇ ಹೆಸರಿನ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದರು. ಟೊರಾಂಟೋ, 'ಅಬು ಧಾಬಿ ಮತ್ತು ಭೂಸಾನ್' ಫಿಲಂ ಫೆಸ್ಟಿವಲ್ಸ್ ನಲ್ಲಿ ಈ ಲಕ್ಕಿ ಚಿತ್ರ ಪ್ರದರ್ಶನಗೊಂಡು ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿ ಪ್ರಶಂಸೆ ಗಿಟ್ಟಿಸಿದೆ. ಜಯಶ್ರೀ ಅಭಿನಯವಂತೂ ಎಷ್ಟು ಚೆನ್ನಾಗಿದೆ ಎಂಬುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ.

ನಾಲ್ಕನೇ ವರ್ಷದಲ್ಲಿಯೇ ವೇದಿಕೆ ಹತ್ತಿದ್ದ ಜಯಶ್ರೀ, ಇಂದೂ ಕೂಡ ನಾಟಕ, ಗಾಯನ ಹಾಗೂ ನಟನೆ ಎಲ್ಲಾ ವಿಭಾಗಗಳ ಸಕ್ರಿಯ ಕಲಾವಿದೆ. ನಾಗಮಂಡಲ, ಕೇರ್ ಆಫ್ ಫುಟ್ ಪಾತ್, ಅಲೆಮಾರಿ, ದೇವೇರಿ ಹಾಗೂ ಸಾಕಷ್ಟು ಸಿನಿಮಾದಲ್ಲಿ ಜಯಶ್ರೀ ನಟಿಸಿದ್ದಾರೆ. ಜಯಶ್ರೀ ಗೆ ಬಂದ ಪ್ರಶಸ್ತಿ ಕನ್ನಡಿಗರೆಲ್ಲರಿಗೂ ಖುಷಿಯ ಸಂಗತಿ. ಕನ್ನಡ ಚಿತ್ರರಂಗಕ್ಕೆ ಬಿ. ಜಯಶ್ರೀ ಅವರೇ ದೊಡ್ಡ ಪ್ರಶಸ್ತಿ. (ಒನ್ ಇಂಡಿಯಾ ಕನ್ನಡ)

More from Filmibeat

English summary
The famous theater personality, prolific singer in high pitch, current Rajya Sabha member Dr Jayashree daughter of doyen of theater Gubbi Veeranna has bagged the award for her performance in ‘Lucky’ in the direction of A Luthra. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X