ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ರಂಭಾ
ಶೋಡಷಿಯಾಗಿ 'ಸರ್ವರ್ ಸೋಮಣ್ಣ' ಕನ್ನಡ ಚಿತ್ರದ ಮುಖಾಂತರ ಚಿತ್ರರಂಗಕ್ಕೆ ತಮ್ಮ ಕೋಮಲ ಪಾದ ಊರಿದ್ದ ದಕ್ಷಿಣ ಭಾರತದ ನಟಿ ರಂಭಾ ಸಂಕ್ರಾಂತಿ ಹಬ್ಬ, ಜನವರಿ 14ರಂದು ಕೆನಡಾದ ಟೊರೊಂಟೊದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಕೆನಡಾದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ ಇಂದಿರನ್ ಪದ್ಮನಾಭನ್ ಅವರನ್ನು ರಂಭಾ ಕಳೆದ ವರ್ಷದ ಏಪ್ರಿಲ್ 8ರಂದು ತಿರುಪತಿಯಲ್ಲಿ ವರಿಸಿದ್ದರು ನಂತರ ನ್ಯೂಜಿಲಂಡ್ ಗೆ ಮಧುಚಂದ್ರಕ್ಕೆಂದು ಹೋಗಿದ್ದರು. ಸರಿಯಾಗಿ ಒಂಬತ್ತು ತಿಂಗಳ ಅವಧಿಯಲ್ಲಿ ಕರುಳಕುಡಿ ಜನ್ಮತಾಳಿ ಬಂದಿದೆ. ಹೆರಿಗೆ ಆಗುವಾಗ ರಂಭಾ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದರೆಂದು ಮೂಲಗಳಿಂದ ತಿಳಿದುಬಂದಿದೆ.
ನವರಸ ನಾಯಕ ಜಗ್ಗೇಶ್ ಜೊತೆಯಲ್ಲಿ 'ಸರ್ವರ್ ಸೋಮಣ್ಣ', ಕನಸುಗಾರ ರವಿಚಂದ್ರನ್ ಜೊತೆಯಲ್ಲಿ 'ಓ ಪ್ರೇಮವೆ', ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಜೊತೆ 'ಭಾವ ಭಾವಮೈದ', ಸಾಹಸಸಿಂಹ ವಿಷ್ಣುವರ್ಧನ್ ಜೊತೆ 'ಸಾಹುಕಾರ', ರಸಿಕ ರವಿಚಂದ್ರನ್ ಜೊತೆಯಲ್ಲಿ 'ಪಾಂಡು ರಂಗ ವಿಠಲ', ಶಿವಣ್ಣ ಜೊತೆ 'ಗಂಡುಗಲಿ ಕುಮಾರರಾಮ', 'ಅನಾಥರು' ಚಿತ್ರದಲ್ಲಿ ವಿಶೇಷ ಭೂಮಿಕೆಯಲ್ಲಿ ರಂಭಾ ಕನ್ನಡ ಚಿತ್ರ ರಸಿಕರ ಮನ ಗೆದ್ದಿದ್ದಾರೆ. ಅವರಿಗೆ ಒಂದು ಶುಭಾಶಯ ಹೇಳಿ. [ರಂಭಾ]


Click it and Unblock the Notifications











