»   » ಗಳಿಕೆಯಲ್ಲಿ ಮುಂದಿರುವ ಟಾಪ್ ಐದು ಕನ್ನಡ ಚಿತ್ರಗಳು

ಗಳಿಕೆಯಲ್ಲಿ ಮುಂದಿರುವ ಟಾಪ್ ಐದು ಕನ್ನಡ ಚಿತ್ರಗಳು

Subscribe to Filmibeat Kannada

1.ಬಿಂದಾಸ್: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿರುವ 'ಬಿಂದಾಸ್' ಚಿತ್ರ ನಿರ್ಮಾಪಕ ಚಂದ್ರಶೇಖರ್ ಕಿಸೆ ತುಂಬಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರ ನಿರ್ಮಾಣದ ಎರಡರಷ್ಟು ಹಣ ನಿರ್ಮಾಪಕರ ಕೈಸೇರಿದೆ. ಪುನೀತ್‌ರೊಂದಿಗೆ ನಟಿಸಿರುವ ಹಂಸಿಕಾ ಮೋಟ್ವಾನಿ ಚಿತ್ರದ ಪ್ರಧಾನ ಆಕರ್ಷಣೆ. ಇಂಪಾದ ಹಾಡುಗಳು, ಮನೆಮಂದಿ ಕೂತು ನೋಡಬಹುದಾದ ಚಿತ್ರವಾದ ಕಾರಣ 'ಬಿಂದಾಸ್' ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. 'Be happy No BP' ಉಪ ಶೀರ್ಷಿಕೆಯನ್ನು 'ಬಿಂದಾಸ್' ನಿಜಮಾಡಿದೆ.

2.ಗಾಳಿಪಟ:ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ಟರ 'ಗಾಳಿಪಟ' 5ನೇ ವಾರದಲ್ಲಿ 6.5 ಕೋಟಿ ರೂ.ಗಳನ್ನು ಗಳಿಸಿದೆ. ಅಂದರೆ ಐದೇ ವಾರದಲ್ಲಿ ಹಾಕಿದ ಬಂಡವಾಳ ನಿರ್ಮಾಪಕರ ಕೈಸೇರಿದೆ.'ಗಾಳಿಪಟ' ಯಶಸ್ವಿ 9ನೇ ವಾರ ಪ್ರದರ್ಶನ ಕಾಣುತ್ತಿದೆ. ಉತ್ತಮ ತಾರಾಬಳಗ, ಕಿವಿಗೆ ಇಂಪಾದ ಹಾಡು, ಸಾಹಿತ್ಯ ಮತ್ತು ಕಣ್ಣಿಗೆ ಹಿತವೆನಿಸುವ ಛಾಯಾಗ್ರಹಣ ಚಿತ್ರದ ಪ್ರಮುಖ ಅಂಶಗಳು. ಪ್ರಸ್ತುತ ಎಸ್‍ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳ ಕಾರಣ ಗಳಿಕೆಯಲ್ಲಿ ಸ್ವಲ್ಪ ಹಿಂದುಳಿದಿದೆ. ಏಪ್ರಿಲ್ ಮೊದಲ ವಾರದ ನಂತರ ಮತ್ತಷ್ಟು ಗಳಿಸುವ ನಿರೀಕ್ಷೆ ಇದೆ.

3.ಗಜ: ಉತ್ತಮ ಕಥೆ-ಚಿತ್ರಕಥೆ, ದರ್ಶನ್ ನಟನೆ, ಹೃದಯಕ್ಕೆ ಆಪ್ತ ಎನಿಸುವ ನವ್ಯಾ ನಾಯರ್ ನಟನೆ 'ಗಜ' ಇನ್ನು ಚಿತ್ರಮಂದಿರಗಳಲ್ಲಿ ಉಳಿಯಲು ಕಾರಣವಾಗಿದೆ. ತೆಲುಗಿನ 'ಭದ್ರ' ಚಿತ್ರದ ರಿಮೇಕ್ ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ಮನರಂಜನಾ ತೆರಿಗೆಯಿಂದ ವಿನಾಯಿತಿ ಕೊಡಲು ಹಿಂಜರಿದಿತ್ತು. ರಾಜ್ಯ ಸರ್ಕಾರ ಶೇ.100ರಷ್ಟು ಮನರಂಜನಾ ತೆರಿಗೆ ವಿಧಿಸದಿದ್ದರೆ 'ಗಜ' ಚಿತ್ರದ ನಿರ್ಮಾಪಕರಾದ ಸುರೇಶ್‌ಗೌಡ ಹಾಗೂ ಶ್ರೀನಿವಾದ ಮೂರ್ತಿ ಅವರಿಗೆ ಬಂಪರ್ ಬೆಳೆಯನ್ನೇ ತಂದುಕೊಡುತ್ತಿತ್ತು ಈ ಚಿತ್ರ. ಆದರೂ ಗಳಿಕೆಯಲ್ಲಿ ಹಿಂದುಳಿದಿಲ್ಲ.

4.ನಂದ ಲವ್ಸ್ ನಂದಿತಾ: ಚಿತ್ರ ತೆರೆಕಂಡ ಮೂರು ದಿನಗಳಲ್ಲೇ ಉತ್ತಮ ಮೊತ್ತ ಗಳಿಸಿದೆ. ಉತ್ತಮ ಆರಂಭ ಕಂಡಿರುವ ನಂದ ಲವ್ಸ್ ನಂದಿತಾ ಸತತ ಎರಡು ವಾರ ಇದೇ ರೀತಿ ಗಳಿಸಿದರೆ ಬಾಕ್ಸಾಫೀಸಲ್ಲಿ ಗೆದ್ದಂತೆ. ಲೂಸ್ ಮಾದ ಅಲಿಯಾಸ್ ಯೋಗೇಶ್ ಅದೃಷ್ಟ ಖುಲಾಯಿಸಿದಂತೆ.

5.ಇಂತಿ ನಿನ್ನ ಪ್ರೀತಿಯ: ನಿರ್ಮಾಪಕರನ್ನು ಗೆಲ್ಲಿಸಿದ್ದರೆ ವಿತರಕರನ್ನು ಸೋಲಿಸಿದ ಚಿತ್ರ. ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ ಓಕೆ ಅನ್ನಿಸಿಕೊಂಡಿತು. ನಂತರ ಎರಡು ಮತ್ತು ಮೂರನೆ ವಾರದಲ್ಲಿ ಬಾಕ್ಸಾಫೀಸಲ್ಲಿ ಝಣ ಝಣ ಕಾಂಚಾಣ ಕುಣಿಯಲಿಲ್ಲ. ಕುಡುಕನೊಬ್ಬನ ಕಥೆಯನ್ನು ಮನೆಮಂದಿಯಲ್ಲಾ ಬಂದು ನೋಡಲು ಹಿಂಜರಿದಿದ್ದೇ ಚಿತ್ರ ಗಳಿಕೆಯಲ್ಲಿ ಸೊಲಲು ಕಾರಣ. ನಿರ್ದೇಶಕ ಸೂರಿಯ ಮೊದಲ ಚಿತ್ರ 'ದುನಿಯಾ'ವನ್ನು ಸ್ವೀಕರಿಸಿದಂತೆ 'ಇಂತಿ ನಿನ್ನ ಪ್ರೀತಿಯ' ಚಿತ್ರವನ್ನು ಪ್ರೇಕ್ಷಕ ಸ್ವೀಕರಿಸಲಿಲ್ಲ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada