»   » ಪುಟ್ಟಣ್ಣ ಕಣಗಾಲ್ ಅಪರೂಪ ಪುಸ್ತಕ ಲೋಕಾರ್ಪಣೆ

ಪುಟ್ಟಣ್ಣ ಕಣಗಾಲ್ ಅಪರೂಪ ಪುಸ್ತಕ ಲೋಕಾರ್ಪಣೆ

Posted By:
Subscribe to Filmibeat Kannada
Puttanna Kanagal
ಕನ್ನಡದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಬಗ್ಗೆ ಬಂದ ಪುಸ್ತಕಗಳು ಕಡಿಮೆಯೆಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ ಅವರ ಬಗೆಗಿನ ಒಂದು ಅಪರೂಪದ ಪುಸ್ತಕವೊಂದು ಭಾನುವಾರ (ಡಿ.18) ಲೋಕಾರ್ಪಣೆಗೊಂಡಿದೆ.

ಎಚ್ ಎನ್ ನರಹರಿ ರಾವ್ ಹಾಗೂ ಎಂ ಕೆ ರಾಘವೇಂದ್ರ ಬರೆದಿರುವ 'Puttanna Kanagal-The Artistic Vision of a Popular Film Maker' ಎಂಬ ಕೃತಿ ಪುಟ್ಟಣ್ಣ ಅವರ ಹಲವು ಚಿತ್ರಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಪುಸ್ತಕದಲ್ಲಿ ಪುಟ್ಟಣ್ಣ ನಿರ್ದೇಶನದ 15 ಚಿತ್ರಗಳ ವಿಮರ್ಶೆಯಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು ಮಾತನಾಡುತ್ತಾ, ಪುಟ್ಟಣ್ಣ ಅವರ ಚಿತ್ರಗಳ ಬಗೆಗಿನ ಕೃತಿ ಇಡೀ ಜಗತ್ತಿಗೆ ಸಾರುತ್ತದೆ. ಕನ್ನಡ ಚಿತ್ರರಂಗದಲ್ಲಿ ಪುಟ್ಟಣ್ಣ ಅವರ ಕೆಲಸ ಕಾರ್ಯಗಳು ಮೈಲಿಗಲ್ಲಾಗಿ ನಿಲ್ಲುತ್ತವೆ ಎಂದರು. ಕನ್ನಡ ಚಿತ್ರಗಳ ಅಭಿವೃದ್ಧಿಗೆ ತೊಡಕಾಗಿರುವ ಸಂಗತಿಗಳ ಬಗ್ಗೆ ಸರಕಾರ ಗಮನಹರಿಸಲಿದೆ ಎಂದು ಭರವಸೆ ನೀಡಿದರು. (ಏಜೆನ್ಸೀಸ್)

English summary
The book on popular film maker Puttanna Kanagal, Puttanna Kanagal-The Artistic Vision of a Popular Film Maker released on Sunday in ongoing Bangalore International Film Festival.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada