»   » ಬುದ್ಧಿವಂತನ ಚಿತ್ರಾನ್ನ ಮತ್ತೊಬ್ಬರಿಗೆ ಮೃಷ್ಟಾನ್ನ

ಬುದ್ಧಿವಂತನ ಚಿತ್ರಾನ್ನ ಮತ್ತೊಬ್ಬರಿಗೆ ಮೃಷ್ಟಾನ್ನ

Posted By:
Subscribe to Filmibeat Kannada
Upendra in udhivantha
ಯಶಸ್ವಿ ಚಿತ್ರದ ಗೀತೆಯೊಂದರ ಸಾಲನ್ನು ಶೀರ್ಷಿಕೆಯಾಗುಳ್ಳ ಬಹಳಷ್ಟು ಚಿತ್ರಗಳು ತೆರೆಗೆ ಬಂದಿವೆ. ತಡ ಮಾಡಿದರೆ ಮತ್ತೊಬ್ಬರು ಎಲ್ಲಿ ಆ ಶೀರ್ಷಿಕೆಯನ್ನು ತಮ್ಮದಾಗಿಸಿಕೊಳ್ಳುತ್ತಾರೊ ಎಂಬ ಧಾವಂತದಲ್ಲಿ ಹಲವಾರು ಚಿತ್ರಗೀತೆಗಳ ಸಾಲುಗಳು ನೋಂದಣಿಯಾಗುತ್ತಿವೆ.

ಉಪೇಂದ್ರ ನಾಯಕ ನಟನಾಗಿ ನಟಿಸಿದ 'ಬುದ್ಧಿವಂತ' ಚಿತ್ರದ 'ಚಿತ್ರಾನ್ನ ಚಿತ್ರಾನ್ನ' ಎಂಬ ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಈಗ ಆ ಹಾಡು ಸಹ ಶೀರ್ಷಿಕೆಯಾಗಿದೆ. ಜನಪ್ರಿಯ ಗೀತೆಗಳ ಶೀರ್ಷಿಕೆಯನ್ನು ಹೊಂದಿರುವ 'ಹಾಗೆ ಸುಮ್ಮನೆ' ಚಿತ್ರ ಇನ್ನೇನು ತೆರೆ ಕಾಣಲಿದೆ. ಶಿವರಾಜ್ ಕುಮಾರ್ ನಟನೆಯ 'ಚೆಲುವೆಯೆ ನಿನ್ನ ನೋಡಲು' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ವೇಳೆಯಲ್ಲಿ ಬುದ್ಧಿವಂತ ಚಿತ್ರದ ಹಾಡು ಚಿತ್ರವಾಗುತ್ತಿದೆ.

ಸಾಯಿ ಜಯದೇವ್ ನಿರ್ದೇಶಿಸಲಿರುವ 'ಚಿತ್ರಾನ್ನ' ಚಿತ್ರವನ್ನು ನಾಗೇಶ್ ರಾವ್ ನಿರ್ಮಿಸಲಿದ್ದಾರೆ. ಚಿತ್ರಾನ್ನ ಚಿತ್ರದಲ್ಲಿ ಶಕ್ತಿ, ವೆಂಕಿ, ವಿಕಾಸ್, ದೀಪಿಕಾ, ಜಾಹ್ನವಿ, ತಾರಾ, ಬ್ಯಾಂಕ್ ಜನಾರ್ಧನ, ಗಣೇಶ್ ರಾವ್, ವಿಶ್ವನಾಥ್, ಬೀರಾದಾರ್ ಮುಂತಾದವರನ್ನು ಒಳಗೊಂಡಚಿತ್ರಕ್ಕೆ ಮಹಂತೇಶ್ ನೃತ್ಯ ಸಂಯೋಜಿನೆ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada