»   » ಸೆ.20ಕ್ಕೆ ನಟ ದರ್ಶನ್ ಪ್ರಕರಣದ ಅಂತಿಮ ತೀರ್ಪು

ಸೆ.20ಕ್ಕೆ ನಟ ದರ್ಶನ್ ಪ್ರಕರಣದ ಅಂತಿಮ ತೀರ್ಪು

Posted By:
Subscribe to Filmibeat Kannada
<ul id="pagination-digg"><li class="next"><a href="/news/19-actor-darshan-fans-tonsured-heads-aid0052.html">Next »</a></li></ul>

ನಟ ದರ್ಶನ್ ಜಾಮೀನು ಪ್ರಕರಣವನ್ನು ಕೈಗೆತ್ತಿಕೊಂಡ ಸೆಷನ್ಸ್ ನ್ಯಾಯಲಯ ತೀರ್ಪನ್ನು ಮಂಗಳವಾರಕ್ಕೆ (ಸೆ.20) ಕಾದಿರಿಸಿದೆ. ಸೋಮವಾರ(ಸೆ.19) ಬೆಳಗ್ಗೆ ವಿಚಾರಣೆ ಆರಂಭಿಸಿದ ನ್ಯಾಯಾಲಯ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತ್ತು.

ನಟ ದರ್ಶನ್ ಪರ ವಕೀಲ ವೆಂಕಟರೆಡ್ಡಿ ಅವರು ಪತ್ನಿ ಮೇಲೆ ಅನುಕಂಪ ನೀಡಿ ಜಾಮೀನು ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದರು. ದರ್ಶನ್ ತೆರೆಯ ಮೇಲೆ ಒಬ್ಬ ಜನಪ್ರಿಯ ನಟ. ಚಿತ್ರಗಳಲ್ಲಿ ಹೆಣ್ಣಿನ ಪರ ಹೋರಾಡುತ್ತಾರೆ. ಆದರೆ ನಿಜ ಜೀವನದಲ್ಲಿ ದರ್ಶನ್ ಭಿನ್ನ ಎಂದು ವಾದಿಸಿದರು.

ಪತ್ನಿ ವಿಜಯಲಕ್ಷ್ಮಿಗೆ ಸಿಗರೇಟ್‌ನಿಂದ ಸುಡಲಾಗಿದೆ. ಪತ್ನಿ ಮೇಲೆ ಹಲ್ಲೆ ಮಾಡಿದ್ದು ಅಮಾನವೀಯ. ದರ್ಶನ್ ಅವರ ಈ ಅಮಾನವೀಯ ವರ್ತನೆಯನ್ನು ಕ್ಷಮಿಸಬಾರದು. ಅವರಿಗೆ ಜಾಮೀನು ಕೊಟ್ಟರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ವಾದಿಸಿದರು. ವಾದ ವಿವಾದಗಳನ್ನು ಆಲಿಸಿರುವ ನ್ಯಾಯಾಧೀಶರು ಅಂತಿಮ ತೀರ್ಪನ್ನು ಮಂಗಳವಾರಕ್ಕೆ ಕಾದಿರಿಸಿದ್ದಾರೆ.

<ul id="pagination-digg"><li class="next"><a href="/news/19-actor-darshan-fans-tonsured-heads-aid0052.html">Next »</a></li></ul>
English summary
The Session court on Monday (Sept 19) reserved its order on the bail application of Kannada actor Darshan Toogudeepa for Tuesday (Sept 20) in cases filed by his wife Vijayalakshmi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada