ಸಾರಥಿ ರೋಡ್ ಶೋಗೆ ಚಾಲೆಂಜಿಂಗ್ ಸ್ಟಾರ್ ಚಾಲನೆ
ನಟ ದರ್ಶನ್ ಹಾಗೂ ದೀಪಾ ಸನ್ನಿಧಿ ಮುಖ್ಯಭೂಮಿಕೆಯಲ್ಲಿರುವ ಸಾರಥಿ ಚಿತ್ರದ ರೋಡ್ ಶೋಗೆ ಬುಧವಾರ (ಅ.19) ಚಾಲನೆ ಪಡೆದುಕೊಳ್ಳಲಿದೆ. ಸೆ.30ರಿಂದ ಸಾರಥಿ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ನರ್ತಕಿ ಚಿತ್ರಮಂದಿರದಿಂದ ರೋಡ್ ಶೋ ಆರಂಭವಾಗಲಿದೆ.
ದರ್ಶನ್ ಅಭಿನಯದ ಎಲ್ಲ ಚಿತ್ರಗಳ ದಾಖಲೆಯನ್ನು ಸಾರಥಿ ಚಿತ್ರ ಅಳಿಸಿ ಹಾಕಿದೆ. ಬಾಕ್ಸಾಫೀಸಿನಲ್ಲಿ ಈ ಚಿತ್ರ ಹೊಸ ದಾಖಲೆಗೆ ಕಾರಣವಾಗಿದೆ. ಈ ಗೆಲುವನ್ನು ಆಚರಿಸಲು ದರ್ಶನ್ ಮುಂದಾಗಿದ್ದು ಇಂದು ರಾತ್ರಿ 9.30ಕ್ಕೆ ರೋಡ್ ಶೋ ಆರಂಭವಾಗಲಿದೆ.
ನರ್ತಕಿ ಚಿತ್ರಮಂದಿರದಲ್ಲಿ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಿ ರೋಡ್ ಶೋ ಆರಂಭಿಸಲಾಗುತ್ತದೆ. ದರ್ಶನ್, ದೀಪಾ ಸನ್ನಿಧಿ ಚಿತ್ರದ ನಿರ್ದೇಶಕ ದಿನಕರ್ ತೂಗುದೀಪ ಹಾಗೂ ಛಾಯಾಗ್ರಾಹಕ ಕೃಷ್ಣ ಕುಮಾರ್ ಸೇರಿದಂತೆ ಚಿತ್ರದ ತಂತ್ರಜ್ಞರು ಕಲಾವಿದರು ಸಾರಥಿಗೆ ಸಾಥ್ ನೀಡಲಿದ್ದಾರೆ. ರೋಡ್ ಶೋ ಎಲ್ಲೆಲ್ಲಿ ಸಾಗಲಿದೆ ಕ್ಲಿಕ್ಕಿಸಿ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Actor Darshan lead movie Sarathi showing successfully all over Karnataka. The Road show will be flagged off at 9.30 P.M. in the Narthaki theater after the Milk Abhishekham to Goddess Chamundeshwari Idol at the theater.


Click it and Unblock the Notifications











