ಇಪ್ಪತ್ತು ಪ್ಲಸ್ ಹುಡುಗಿಯ ಕೈಹಿಡಿದ ದಿನೇಶ್ ಬಾಬು

By Rajendra

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ದಿನೇಶ್ ಬಾಬು ತಮ್ಮ ಸಹಾಯಕಿ ಚೇತನಾರನ್ನು ವರಿಸುವ ಮೂಲಕ ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ದಿನೇಶ್ ಬಾಬು ಅವರಿಗೆ ಇದು ಎರಡನೆ ಮದುವೆ. ಎರಡು ವರ್ಷದ ಹಿಂದಷ್ಟೆ ಅವರು ಮೊದಲ ಪತ್ನಿಯಿಂದ ವಿವಾಹ ವಿಚ್ಛೇದನ ಪಡೆದಿದ್ದರು.

ದಿನೇಶ್ ಬಾಬು ಅವರಿಗೆ ಈಗ 52 ವರ್ಷ ವಯಸ್ಸು. ಚೇತನಾ ಅವರ ವಯಸ್ಸು ಇನ್ನೂ ಇಪ್ಪತ್ತು ಪ್ಲಸ್. ಬಾಬು ಅವರ ಮೊದಲ ಪತ್ನಿಯ ಮಗಳಿಗೆ ಕಳೆದ ವರ್ಷವಷ್ಟೆ ಮದುವೆಯಾಗಿತ್ತು. ಈಗ ಅವರು ಕೈಹಿಡಿದಿರುವ ಚೇತನಾ ಅವರಿಗೂ ಮಗಳ ವಯಸ್ಸು ಎಂಬುದು ಗಮನಾರ್ಹ ಅಂಶ. ಬಾಬು ಮತ್ತು ಚೇತನಾ ಮದುವೆ ನಾಲ್ಕು ತಿಂಗಳ ಹಿಂದೆಯೇ ನಡೆದಿದೆ ಎನ್ನಲಾಗಿದೆ.

ಚೇತನಾ ಅವರು ಜನುಮದ ಗೆಳತಿ, ಮಿಸ್ಟರ್ ಪೈಂಟರ್, ಎರಡನೆ ಮದುವೆ ಚಿತ್ರಗಳಿಗೆ ಬಾಬು ಅವರ ಜೊತೆ ಸಹಾಯಕಿಯಾಗಿಕೆಲಸ ಮಾಡಿದ್ದರು. ವಿಚಿತ್ರವೆಂದರೆ ಬಾಬು ನಿರ್ದೇಶನದ 'ಎರಡನೆ ಮದುವೆ' ಚಿತ್ರ ಎರಡು ತಿಂಗಳ ಹಿಂದಷ್ಟೆ ತೆರೆಕಂಡಿತ್ತು. ಈಗ ಅವರೆ ಎರಡನೆ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕಿರುತೆರೆ ಹಾಗೂ ಪೋಷಕ ನಟಿ ಆಶಾಲತಾ ಎಂಬುವವರ ಮಗಳು ಚೇತನಾ. ಬಾಬು ಮತ್ತು ಚೇತನಾ ಬಹಳ ದಿನಗಳಿಂದ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇವರಿಬ್ಬರ ಮದುವೆ ಗುರುಹಿರಿಯರ ನಿಶ್ಚಯದ ಮೇರೆಗೆ ನಡೆದಿದೆ ಎನ್ನುತ್ತವೆ ಮೂಲಗಳು.

"ನನಗೆ ಇದು ದೊಡ್ಡ ವಿಷಯ ಇರಬಹುದು ಆದರೆ ಬೇರೆಯವರಿಗಲ್ಲ. ನಮ್ಮಿಬ್ಬರ ಮದುವೆ ಹಿರಿಯರ ಮಾರ್ಗದರ್ಶನದಲ್ಲಿ ಖಾಸಗಿಯಾಗಿ ನೆರವೇರಿತು" ಎಂದು ದಿನೇಶ್ ಬಾಬು ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿಗೆ ಮಾತನಾಡಲು ನಿರಾಕರಿಸಿರುವ ಬಾಬು "ಇದು ನಮ್ಮ ಖಾಸಗಿ ವಿಷಯ" ಎಂದು ಹೇಳಿದ್ದಾರೆ.

ಸದ್ಯಕ್ಕೆ ಹೈದರಾಬಾದ್ ನಲ್ಲಿರುವ ದಿನೇಶ್ ಬಾಬು ತೆಲುಗು ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಮೂಲತಃ ಛಾಯಾಗ್ರಾಹಕರಾದ ದಿನೇಶ್ ಬಾಬು ಬಳಿಕ ಚಿತ್ರ ನಿರ್ದೇಶನದಲ್ಲಿ ತಮ್ಮದೇ ಆದಂತಹ ಪ್ರತಿಭೆಯನ್ನು ಪ್ರದರ್ಶಿಸಿದವರು. ನಿಜಜೀವನದಲ್ಲೂ 'ಎರಡನೆ ಮದುವೆ'ಯಾದ ದಿನೇಶ್ ಬಾಬು ಈಗ 'ಮತ್ತೊಂದು ಮದುವೆ' ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X