ನಿರ್ದೇಶಕ ನಾಗಾಭರಣರಿಂದ ಬೇಕಲ ಕೋಟೆ ಶೃಂಗಾರ

ಕಾಸರಗೋಡಿನಲ್ಲಿರುವ ಈ ಕೋಟೆ ನೈಸರ್ಗಿಕವಾಗಿ ತುಂಬಾ ಸಂಪದ್ಭರಿತ. ಇದು ಪ್ರಖ್ಯಾತ ಪ್ರವಾಸಿತಾಣವೂ ಹೌದು. ಈ 'ಐತಿಹಾಸಿಕ' ಖ್ಯಾತಿಯ ಕೋಟೆ ಸಿನಿಮಾ ಪ್ರಿಯರ ಅಚ್ಚುಮೆಚ್ಚಿನ ತಾಣವೂ ಹೌದು. ಇಷ್ಟು ದಿನ ನೈಸರ್ಗಿಕವಾಗಿದ್ದ ಈ ಕೋಟೆಗೆ, ಈಗ ಕನ್ನಡ ಚಿತ್ರ ನಿರ್ದೇಶಕ ನಾಗಾಭರಣ ಕಣ್ಣು ಬಿದ್ದಿದೆ.
ಅವರೇನೂ ಕೋಟೆ ಹತ್ತಲು ಅಥವಾ ಕೆಡವಲು ಹೋಗುತ್ತಿಲ್ಲ. 'ಸ್ಪೆಷಲ್ ಲೈಟ್ ಮತ್ತು ಸೌಂಡ್' ಮೆರಗು ನೀಡಲು ಹೊರಟಿರುವ ಅವರು, ಅದಕ್ಕಾಗಿ ಕೇಂದ್ರ ಪ್ರಾಚ್ಯವಸ್ತು ಪ್ರಾಧಿಕಾರದಿಂದ ಪ್ರಾಜೆಕ್ಟ್ ಅಪ್ರೂವ್ ಮಾಡಿಸಿಕೊಂಡಿದ್ದಾರೆ. ಸದ್ಯದಲ್ಲಿಯೇ ಕೆಲಸ ಕೈಗೆತ್ತಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ಫಿಲಂ ಅಕಾಡೆಮಿಯ ಅಧ್ಯಕ್ಷ. ಈ ಕುರ್ಚಿಯಿಂದ ಇಳಿದ ತಕ್ಷಣ, ಆ ಬೆಟ್ಟಕ್ಕೆ ಸಿಂಗಾರ ಮಾಡಲಿದ್ದಾರಂತೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Director and President of Karanataka film Chamber, Nagabharana is going to offer special lightings and soundings to the Bekal Port of Kasaragod.


Click it and Unblock the Notifications











