twitter
    For Quick Alerts
    ALLOW NOTIFICATIONS  
    For Daily Alerts

    ನಿರ್ದೇಶಕ ನಾಗಾಭರಣರಿಂದ ಬೇಕಲ ಕೋಟೆ ಶೃಂಗಾರ

    |

    Nagabharana
    ಬಾಲಿವುಡ್ ನ 'ಬಾಂಬೆ' ಚಿತ್ರವನ್ನು ನೋಡಿದವರಿಗೆ 'ಬೇಕಲ ಕೋಟೆ' ಹೊಸ ಹೆಸರು ಅಲ್ಲ. ಬಾಂಬೆ ಚಿತ್ರದ ನಿರ್ದೇಶಕ 'ಮಣಿರತ್ನಂ' ಈ ಕೋಟೆಯನ್ನು ತೋರಿಸಿರುವ ರೀತಿಯೇ ಅನನ್ಯ. ಆ ಕೋಟೆಯ ಹತ್ತಿರವೇ ವಾಸಿಸುತ್ತರಿರುವ ಜನರೂ ಕೂಡ ಮುಗಿನ ಮೇಲೆ ಬೆರಳಿಡುವಂತೆ ಚಿತ್ರೀಕರಿಸಿದ್ದಾರೆ ಮಣಿರತ್ನಂ.

    ಕಾಸರಗೋಡಿನಲ್ಲಿರುವ ಈ ಕೋಟೆ ನೈಸರ್ಗಿಕವಾಗಿ ತುಂಬಾ ಸಂಪದ್ಭರಿತ. ಇದು ಪ್ರಖ್ಯಾತ ಪ್ರವಾಸಿತಾಣವೂ ಹೌದು. ಈ 'ಐತಿಹಾಸಿಕ' ಖ್ಯಾತಿಯ ಕೋಟೆ ಸಿನಿಮಾ ಪ್ರಿಯರ ಅಚ್ಚುಮೆಚ್ಚಿನ ತಾಣವೂ ಹೌದು. ಇಷ್ಟು ದಿನ ನೈಸರ್ಗಿಕವಾಗಿದ್ದ ಈ ಕೋಟೆಗೆ, ಈಗ ಕನ್ನಡ ಚಿತ್ರ ನಿರ್ದೇಶಕ ನಾಗಾಭರಣ ಕಣ್ಣು ಬಿದ್ದಿದೆ.

    ಅವರೇನೂ ಕೋಟೆ ಹತ್ತಲು ಅಥವಾ ಕೆಡವಲು ಹೋಗುತ್ತಿಲ್ಲ. 'ಸ್ಪೆಷಲ್ ಲೈಟ್ ಮತ್ತು ಸೌಂಡ್' ಮೆರಗು ನೀಡಲು ಹೊರಟಿರುವ ಅವರು, ಅದಕ್ಕಾಗಿ ಕೇಂದ್ರ ಪ್ರಾಚ್ಯವಸ್ತು ಪ್ರಾಧಿಕಾರದಿಂದ ಪ್ರಾಜೆಕ್ಟ್ ಅಪ್ರೂವ್ ಮಾಡಿಸಿಕೊಂಡಿದ್ದಾರೆ. ಸದ್ಯದಲ್ಲಿಯೇ ಕೆಲಸ ಕೈಗೆತ್ತಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ಫಿಲಂ ಅಕಾಡೆಮಿಯ ಅಧ್ಯಕ್ಷ. ಈ ಕುರ್ಚಿಯಿಂದ ಇಳಿದ ತಕ್ಷಣ, ಆ ಬೆಟ್ಟಕ್ಕೆ ಸಿಂಗಾರ ಮಾಡಲಿದ್ದಾರಂತೆ. (ಒನ್ ಇಂಡಿಯಾ ಕನ್ನಡ)

    English summary
    Director and President of Karanataka film Chamber, Nagabharana is going to offer special lightings and soundings to the Bekal Port of Kasaragod. 
 
    Saturday, November 19, 2011, 17:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X