»   » ಆಪ್ತಮಿತ್ರ ಭಾಗ2ರ ಸಿದ್ದತೆಯಲ್ಲಿ ದ್ವಾರಕೀಶ್

ಆಪ್ತಮಿತ್ರ ಭಾಗ2ರ ಸಿದ್ದತೆಯಲ್ಲಿ ದ್ವಾರಕೀಶ್

Subscribe to Filmibeat Kannada
dwarakish
'ಆಪ್ತಮಿತ್ರ-ಭಾಗ 2' ಮಾಡಲು ತಮ್ಮ ಆಕ್ಷೇಪಣೆ ಏನು ಇಲ್ಲ ಎಂದು ಕನ್ನಡ ಚಿತ್ರರಂಗದ 'ಮಹಾಕುಳ್ಳ' ದ್ವಾರಕೀಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ವಿವರ ನೀಡಿದರು.ಈ ಚಿತ್ರವನ್ನು ಮಾಡಲು ನಿರ್ದೇಶಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತೇನೆ. ಆದರೆ ಈ ಚಿತ್ರದಲ್ಲಿ ಮತ್ತೆ ನಾನು ಬಣ್ಣಬಳಿದುಕೊಳ್ಳಲು ಆಸಕ್ತಿ ಇಲ್ಲ ಎಂದು ದೃಢಪಡಿಸಿದ್ದಾರೆ.ಬಹುಶಃ ಆಪ್ತಮಿತ್ರ-ಭಾಗ-2 ವಿಷ್ಣುವರ್ಧನ್ ರ 200ನೇ ಚಿತ್ರವಾಗುವ ಎಲ್ಲ ಸಾಧ್ಯತೆಗಳೂ ಇವೆ.

'ಆಪ್ತಮಿತ್ರ'ದ ತಾರಾಬಳಗ ವಿಷ್ಣುವರ್ಧನ್ ಆದಿಯಾಗಿ ಎಲ್ಲರೂ ಭಾಗ-2ರಲ್ಲೂ ನಟಿಸಲಿದ್ದಾರೆ. ಆದರೆ ನಾಗವಲ್ಲಿಯಾಗಿ ಸೌಂದರ್ಯ ಅವರ ಪಾತ್ರವನ್ನು ಮತ್ತೆ ಸೃಷ್ಟಿಸಲು ಸಾಧ್ಯವೆ? ಎಂಬ ಪ್ರಶ್ನೆಗೆ ದ್ವಾರಕೀಶ್ ಉತ್ತರಿಸಿದ್ದು ಹೀಗೆ....ಬರೀ ಸೌಂದರ್ಯ ಅವರಿಂದಲೇ ಚಿತ್ರ ಯಶಸ್ವಿಯಾಯಿತು ಎಂಬ ಮಾತನ್ನ್ನು ತಾವು ಒಪ್ಪುವುದಿಲ್ಲ. ಆಪ್ತಮಿತ್ರ ಯಶಸ್ವಿ ಹಿಂದೆ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ಮಂದಿಯ ಬೆವರಿದೆ. ಹಾಗೆಯೇ ಚಿತ್ರದ ಯಶಸ್ವಿಗೆ ಸಾಕಷ್ಟು ಕಾರಣಗಳೂ ಇವೆ ಎನ್ನುತ್ತಾರೆ ದ್ವಾರಕೀಶ್.

''ಆಪ್ತಮಿತ್ರನನ್ನು ಮೀರಿಸುವಂತ ಮತ್ತೊಂದು ಚಿತ್ರ ನಿರ್ಮಿಸುವುದು ಅಷ್ಟು ಸುಲಭವಲ್ಲ. ಇದೇ ರೀತಿ ತಮ್ಮ ಯಶಸ್ವಿ ಚಿತ್ರಗಳ ಧಾಟಿಯಲ್ಲೇ ಬಂದಹಲವಾರು ಚಿತ್ರಗಳು ಮಕಾಡೆ ಮಲಗಿದವು. ಆ ಒಂದು ನೋವು ನನ್ನನ್ನು ಇನ್ನೂ ಬಾಧಿಸುತ್ತಿದೆ. ಈಗ ಆಪ್ತಮಿತ್ರ-ಭಾಗ2 ಮಾಡಬೇಕೆಂದರೂ ಹಳೆಯ ಹೊಡೆತಗಳು ನೆನಪಾಗುತ್ತವೆ ಎನ್ನುತ್ತಾರೆ ದ್ವಾರಕೀಶ್.

ಯಾರಾದರು ಚಿತ್ರನಿರ್ದೇಶಿಸುವ ಅವಕಾಶ ಕೊಟ್ಟರೆ ಖಂಡಿತ ಸ್ವೀಕರಿಸುತ್ತೇನೆ. ಪ್ರಸ್ತುತ ತಾವು ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇನೆ. ಉದ್ಯಮದಲ್ಲಿ ತಮ್ಮ ಬಗ್ಗೆ ಸಾಕಷ್ಟು ಗೌರವವೂ ಇದೆ. ಸಮಯಕ್ಕೆ ಸರಿಯಾಗಿ ಹಣ ಸಂದಾಯವಾಗುತ್ತಿದೆ. ಆರೋಗ್ಯ ಒಂಚೂರು ಕೈಕೊಟ್ಟಿದೆ. ಎರಡು ದಿನ ಚಿತ್ರೀಕರಣದಲ್ಲಿ ತೊಡಗಿಕೊಂಡರೆ ಮೂರು ದಿನ ಸುಧಾರಿಸಿಕೊಳ್ಳಬೇಕಾಗುತ್ತದೆ ಎಂದು ದ್ವಾರಕೀಶ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada