»   » ವಿಜಯ್ ರ 'ಗಣೇಶ ಮತ್ತೆ ಬಂದ' ಚಿತ್ರಕ್ಕೆ ಸಂಗೀತ

ವಿಜಯ್ ರ 'ಗಣೇಶ ಮತ್ತೆ ಬಂದ' ಚಿತ್ರಕ್ಕೆ ಸಂಗೀತ

Subscribe to Filmibeat Kannada

ಹಾಸ್ಯ ಚಿತ್ರಗಳು ಹಾಗೂ ಧಾರಾವಾಹಿಗಳ ಮೂಲಕ ಮನೆಮಾತಾದ ನಿರ್ದೇಶಕ ಫಣಿ ರಾಮಚಂದ್ರ ಮತ್ತೆ ರೀ ಎಂಟ್ರಿ ಕೊಡುತ್ತಿದ್ದಾರೆ. ಅವರ ಮೆಚ್ಚಿನ ಗಣೇಶ ಮತ್ತೆ ತೆರೆಯ ಮೇಲೆ ವಿಜಯ ರಾಘವೇಂದ್ರನ ರೂಪದಲ್ಲಿ ಬರುತ್ತಿದ್ದಾನೆ. ಈ ಮೂಲಕ ಫಣಿ ರಾಮಚಂದ್ರ ಹಾಗೂ ಗಣೇಶನ ಜೋಡಿ ಮತ್ತೆ ಆರಂಭವಾಗುತಿರುವುದು ಶುಭ ಸುದ್ದಿ. ಆದರೆ ಸೀನಿಯರ್ ಗಣೇಶನ ಪಾತ್ರಧಾರಿ ಅನಂತ್ ನಾಗ್ ಪಾತ್ರ ಯಾವ ರೀತಿಯಲ್ಲಿ ಮೂಡಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿದೆ.

ಮದುವೆ ನಂತರ ನಾನು ನೀನು ಜೋಡಿ, ಬೆಳದಿಂಗಳಾಗಿ ಬಾ ಸಾಲುಸಾಲಾಗಿ ಮಕಾಡೆ ಮಲಗಿದ ಮೇಲೆ ವಿಜಯ್ ರಾಘವೇಂದ್ರ ಅವರಿಗೆ 'ಗಣೇಶ ಮತ್ತೆ ಬಂದ' ಚಿತ್ರದ ಮೇಲೆ ಅಪಾರ ನಂಬಿಕೆ ಇದೆ. ಚಿತ್ರ ಖಂಡಿತಾ ಹಾಸ್ಯದ ಹೊನಲನ್ನು ಹರಿಸಲಿದೆ. ಸಂಗೀತ ಕೂಡ ಪೂರಕವಾಗಿದೆ . 'ಗಣೇಶ ಮತ್ತೆ ಬಂದ' ಚಿತ್ರದಲ್ಲಿ ಪ್ರೇಮ ವಿವಾಹ ಮತ್ತು ನಿಶ್ಚಿತ ವಿವಾಹದತ್ತ ತಮ್ಮದೇ ಆದ ದೃಷ್ಟಿ ಹಾಯಿಸಿರುವ ನಿರ್ದೇಶಕರು ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಚಿತ್ರದಲ್ಲಿ ಎತ್ತಿ ಹಿಡಿದಿದ್ದಾರೆ ಎಂದು ವಿಜಯ್ ಹೇಳಿದರು.

ಸೌಭಾಗ್ಯ ಪಿಕ್ಚರ್ಸ್ ಲಾಂಛನದಲ್ಲಿ ಜಯಮ್ಮ ಚಿನ್ನೇಗೌಡ ನಿರ್ಮಿಸುತ್ತಿರುವ, ನಿರ್ದೇಶಕ ಫಣಿರಾಮಚಂದ್ರ ಅವರು ನಿರ್ದೇಶನದ 'ಗಣೇಶ ಮತ್ತೆ ಬಂದ' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟೂಡಿಯೊದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಅವರು ಕಥೆ ಇದೆ. ಆ ಕಥೆಗೆ ಫಣಿರಾಮಚಂದ್ರ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ವಿ.ಮನೋಹರ್ ಸಂಗೀತ, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ವಿ.ಮನೋಹರ್ ಅವರ ಗೀತರಚನೆ. ರಾಮು, ಮಂಜುನಾಥ್ ಸಹನಿರ್ದೆಶನ. ರವಿಶಂಕರ್ ನಿರ್ಮಾಣ ನಿರ್ವಹಣೆ, ಇಸ್ಮಾಲ್ ಕಲೆ, ಚಿನ್ನಿ ಪ್ರಕಾಶ್, ಇಮ್ರಾನ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ವಿಶಾಲ್‌ಹೆಗ್ಗಡೆ, ಅನಂತನಾಗ್, ವಿನಯಾಪ್ರಕಾಶ್, ನೀತೂ, ಪ್ರಜ್ಞ , ಪ್ರೀತಿ, ದೊಡ್ಡಣ್ಣ, ಜಹಾಂಗೀರ್, ವಿಕ್ರಂಸೂರಿ ಮುಂತಾದವರಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada