ಹೆಜ್ಜೆಗಳು ಚಿತ್ರಕ್ಕೆ ಪ್ರತಿಷ್ಠಿತ ಸ್ವರ್ಣ ಕಮಲ ಪ್ರಶಸ್ತಿ

By Rajendra

ಭಾರತ ಸರಕಾರದ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2010 ಪ್ರಕಟವಾಗಿವೆ. ಈ ಬಾರಿ ಕನ್ನಡ ಚಿತ್ರರಂಗ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ರಾಮದಾಸ್ ನಾಯ್ಡು ನಿರ್ದೇಶನದ 'ಹೆಜ್ಜೆಗಳು' ಚಿತ್ರ 'ಸ್ವರ್ಣ ಕಮಲ' ಪ್ರಶಸ್ತಿಗೆ ಪಾತ್ರವಾಗಿದೆ. ಈ ಚಿತ್ರವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಾಲಿ ಅಧ್ಯಕ್ಷ ಹಾಗೂ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ನಿರ್ಮಿಸಿದ್ದರು.

ಇನ್ನು ಶಿವರಾಮ ಕಾರಂತರ ಕಾದಂಬರಿ ಆಧಾರಿತ ಪಿ ಶೇಷಾದ್ರಿ ಅವರ 'ಬೆಟ್ಟದ ಜೀವ' ಚಿತ್ರ ಅತ್ಯುತ್ತಮ ಪರಿಸರ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಶುಕ್ರವಾರ(ಮೇ.20) ತೆರೆಕಾಣಲಿರುವ ಬಿ ಸುರೇಶ್ ಅವರ 'ಪುಟ್ಟಕ್ಕನ ಹೈವೇ' ಚಿತ್ರ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿಯನ್ನು ಪಡೆದಿದೆ. ಬಿಡುಗಡೆಗೂ ಮುನ್ನವೇ ಚಿತ್ರಕ್ಕೆ ಪ್ರಶಸ್ತಿ ಒಲಿದಿರುವುದು 'ಪುಟ್ಟಕ್ಕನ ಹೈವೇ' ಚಿತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮನು ಚಕ್ರವರ್ತಿ ಅವರು ಅತ್ಯುತ್ತಮ ವಿಮರ್ಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರ ವರದಿ ಇಂದು ಮಧ್ಯಾಹ್ನ 2.30ಕ್ಕೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತಲುಪಲಿದ್ದು ಸಂಜೆ 3.30ಕ್ಕೆ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಪ್ರಶಸ್ತಿ ಪಡೆದ ಉಳಿದ ಚಿತ್ರಗಳ ವಿವರಗಳು:
ಅತ್ಯುತ್ತಮ ನಟ: ಧನುಷ್ (ಆಡುಕಲಾಮ್), ಸಲೀಮ್ ಕುಮಾರ್ (ಅಡಮಂಟೆ ಮಕಾನ್ ಅಬು, ಮಲಯಾಳಂ ಚಿತ್ರ)
ಅತ್ಯುತ್ತಮ ನಟಿ: ಮಿತಾಲಿ ಜಗ್‌ತಾಪ್, ಸರಣ್ಯ
ಅತ್ಯುತ್ತಮ ಚಿತ್ರ: ಅಡಮಂಟೆ ಮಕಾನ್ ಅಬು
ಅತ್ಯುತ್ತಮ ನಿರ್ದೇಶಕ: ವೀರಿಮಾರನ್
ವರ್ಷದ ಅತ್ಯುತ್ತಮ ಮನರಂಜನಾತ್ಮಕ ಚಿತ್ರ: ದಬಾಂಗ್
ಅತ್ಯುತ್ತಮ ಹಿಂದಿ ಚಿತ್ರ: ದೋ ದೋನಿ ಚಾರ್
ಅತ್ಯುತ್ತಮ ಇಂಗ್ಲಿಷ್ ಚಿತ್ರ: ಮೆಮೊರೀಸ್ ಇನ್ ಮಾರ್ಚ್
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ಎಂಧಿರನ್, ರೋಬೋಟ್
ಅತ್ಯುತ್ತಮ ಸಂಗೀತ ನಿರ್ದೇಶಕ: ವಿಶಾಲ್ ಭಾರದ್ವಾಜ್: ಇಸ್ಕಿಯಾ
ಅತ್ಯುತ್ತಮ ಗಾಯಕಿ: ರೇಖಾ ಭಾರದ್ವಾಜ್: ಇಸ್ಕಿಯಾ
ಅತ್ಯುತ್ತಮ ಗಾಯಕ: ಸುರೇಶ್ ವಾಡ್ಕರ್
ತೀರ್ಪುಗಾರರ ಮೆಚ್ಚುಗೆ ಪಡೆದ ಚಿತ್ರ: ಕಬೀರಾ ಖಾಡಾ ಬಜಾರ್ ಮೇ
ಅತ್ಯುತ್ತಮ ಶೈಕ್ಷಣಿಕ ಚಿತ್ರ: ಅದ್ವೈತಂ
ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಿತ್ರ: ಲೀವಿಂಗ್ ಹೋಮ್

(ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
National Film Awards 2010 announced. Kannada film industry bags 4 awards. Ramadas Naidu directed 'Hejjegalu' got Golden Lotus Award, B Suresh directed 'Puttakkana Highway' selected for Best Regional Film award, P Sheshadri directed 'Bettada Jeeva' selected for Best Environmental Film and Manu Chakravarthy pockets Best Critic Award. Oneindia-Kannada congratulates the achievers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X